ಐಫೆಲ್ ಟವರ್ ನಿರ್ಮಾಣ ಕಾರ್ಯ ಆರಂಭ
* 1813: ಖ್ಯಾತ ಕಾದಂಬರಿಗಾರ್ತಿ ಜೇನ್ ಆಸ್ಟೇನ್‌ರ ‘ಪ್ರೈಡ್ ಆ್ಯಂಡ್ ಪ್ರಿಜುಡೈಸ್’ ಕೃತಿ ಪ್ರಕಟಗೊಂಡಿತು.
* 1846: ಪ್ರಥಮ ಆಂಗ್ಲೊ-ಸಿಖ್ ಯುದ್ಧದ ಭಾಗವಾದ ಅಲಿವಾಲ್ ಕದನದಲ್ಲಿ ಬ್ರಿಟಿಷರು ಸಿಖ್‌ರನ್ನು ಸೋಲಿಸಿದರು.
* 1887: ಜಗತ್ಪ್ರಸಿದ್ಧ ಐಫೆಲ್ ಟವರ್‌ನ ನಿರ್ಮಾಣ ಕಾರ್ಯ ಆರಂಭಗೊಂಡಿತು.
* 1944: ಎರಡನೇ ವಿಶ್ವ ಮಹಾಯುದ್ಧದ ಭಾಗವಾಗಿ ಸುಮಾರು 683 ಬ್ರಿಟಿಷ್ ಬಾಂಬರ್ ವಿಮಾನಗಳು ಜರ್ಮನಿಯ ಬರ್ಲಿನ್ ಮೇಲೆ ದಾಳಿ ಮಾಡಿದವು.
* 1948: ಅಮೆರಿಕದಿಂದ ಮೆಕ್ಸಿಕೊಗೆ ಕಾರ್ಮಿಕರನ್ನು ತುಂಬಿಕೊಂಡು ಹೊರಟಿದ್ದ ವಿಮಾನವೊಂದು ಅಮೆರಿಕದ ಡಿಯಾಬ್ಲೊ ಪರ್ವತದಲ್ಲಿ ಪತನಗೊಂಡಿತು. ಈ ಸಂದರ್ಭದಲ್ಲಿ 28 ಜನ ರೈತ ಕಾರ್ಮಿಕರು ಅಸುನೀಗಿದರು. * 1986: 7 ಗಗನಯಾತ್ರಿಗಳನ್ನು ಹೊಂದಿದ್ದ ನಾಸಾದ ಬಾಹ್ಯಾಕಾಶ ನೌಕೆ ಚಾಲೆಂಜರ್, ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡಿತು. ಪರಿಣಾಮ ನೌಕೆಯಲ್ಲಿದ್ದ ಏಳು ಜನ ಮೃತಪಟ್ಟರು. ಇದರಲ್ಲಿ ನ್ಯೂ ಹ್ಯಾಂಪ್‌ಶೈರ್‌ನ ಶಿಕ್ಷಕನೋರ್ವ ಕೂಡಾ ಸೇರಿದ್ದರು.
* 1991: ಸರ್ವಾಧಿಕಾರಿ ಸಿಯಾದ್ ಬ್ಯಾರ್ರೆ ದೇಶದಿಂದ ಪಲಾಯನ ಮಾಡುವುದರೊಂದಿಗೆ ಸೋಮಾಲಿಯಾದಲ್ಲಿ 22 ವರ್ಷಗಳ ಸರ್ವಾಧಿಕಾರಿ ಆಳ್ವಿಕೆ ಅಂತ್ಯ ಕಂಡಿತು.
* 1925: ಭಾರತದ ಖ್ಯಾತ ವಿಜ್ಞಾನಿ, ಪೋಖ್ರಾನ್‌ನಲ್ಲಿ ಪರಮಾಣು ಬಾಂಬ್ ಪರೀಕ್ಷಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜಾ ರಾಮಣ್ಣ ಜನ್ಮದಿನ.
1930: ಸುಪ್ರಸಿದ್ಧ ಶಾಸ್ತ್ರೀಯ ಸಂಗೀತಕಾರ ಪಂಡಿತ್ ಜಸರಾಜ್ ಜನ್ಮದಿನ.
2007: ಖ್ಯಾತ ಸಂಗೀತ ನಿರ್ದೇಶಕ ಒ.ಪಿ.ನಯ್ಯರ್ ನಿಧನ