ಇಂದಿನಿಂದ ಸಂಸತ್ ನ ಬಜೆಟ್ ಅಧಿವೇಶನ

Update: 2018-01-29 05:43 GMT

ಹೊಸದಿಲ್ಲಿ, ಜ.29:  ಸಂಸತ್ ನಲ್ಲಿ  ಬಜೆಟ್ ಅಧಿವೇಶನ ಸೋಮವಾರದಿಂದ  ಆರಂಭವಾಗಲಿದೆ.

ಫೆಬ್ರವರಿ 9ವರೆಗೆ  ನಡೆಯಲಿರುವ ಸಂಸತ್ ನ ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ರಾಮನಾಥ ಕೋವಿಂದ್  ಅವರು ಜಂಟಿ ಅಧಿವೇಶನವನ್ನುದ್ದೇಶಿಸಿ  ಮಾತನಾಡಲಿದ್ದಾರೆ.

ಫೆಬ್ರವರಿ 1 ರಂದು  ಬಜೆಟ್ ಮಂಡನೆ ನಡೆಯಲಿದ್ದು, ಹಣಕಾಸು ಸಚಿವ  ಅರುಣ್ ಜೇಟ್ಲಿ ಬಜೆಟ್ ಮಂಡಿಸಲಿದ್ದಾರೆ.

ಅಧಿವೇಶನದಲ್ಲಿ  ತ್ರಿವಳಿ ತಲಾಖ್ ರದ್ದು ಮಸೂದೆ ಅಂಗೀಕಾರ, ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮಸೂದೆ, ಗ್ರಾಹಕರ ರಕ್ಷಣೆ ಮಸೂದೆ , ಮಹಿಳೆಯರ ಮೇಲೆ ದೌರ್ಜನ್ಯ ವಿಚಾರ ಚರ್ಚೆಗೆ ಬರುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News