ಕಲೆಗೆ ಜಾತಿ, ಪಂಥ, ಧರ್ಮದ ಕಟ್ಟುಪಾಡಿಲ್ಲ: ಬೆಳಗಲ್ ವೀರಣ್ಣ

Update: 2018-01-29 15:23 GMT

ಮಂಡ್ಯ, ಜ.29: ಸಾಂಸ್ಕೃತಿಕ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಂಕ್ರಾಂತಿ ಸಂಭ್ರಮ, ಸಾಂಸ್ಕೃತಿಕ ಮಹೋತ್ಸವ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ರಂಗಭೂಮಿ ತಜ್ಞ ಬೆಳಗಲ್ ವೀರಣ್ಣ , ಕಲೆ ಸಾಹಿತ್ಯ, ಸಂಸ್ಕೃತಿಗೆ ಜಾತಿ, ಪಂಥ, ಧರ್ಮದ ಕಟ್ಟುಪಾಡುಗಳಿಲ್ಲ. ಇವು ಜಾತಿ, ಧರ್ಮಕ್ಕೂ ಮೀರಿದ ಮಾಧ್ಯಮಗಳು ಎಂದರು. 

ಜನಸಾಮಾನ್ಯರಿಗೆ ಕಾವ್ಯ, ನಾಟಕಗಳು ಸರಾಗವಾಗಿ ಮುಟ್ಟುವ ಮಾಧ್ಯಮವಾದರೂ ಪರಿಣಾಮ ಬೀರುವಂತಹುದು ರಂಗಭೂಮಿ. ಸಂಗೀತ, ಸಾಹಿತ್ಯ, ಸಂಸ್ಕೃತಿ, ಕಾವ್ಯ ಇದೆಲ್ಲವನ್ನೂ ಮೀರಿದ್ದು ರಂಗಭೂಮಿ ಕ್ಷೇತ್ರ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಸನ್ನಿವೇಶದಲ್ಲಿ ವೃತ್ತಿರಂಗಭೂಮಿ ಕಲಾವಿದರು ಸಂಕಷ್ಟದಲ್ಲಿದ್ದು, ಕಲಾವಿದರು ತಮ್ಮೆಲ್ಲಾ ನೋವುಗಳನ್ನು ಅನುಭವಿಸುತ್ತಲೇ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರೆ. ಇದು ರಂಗಭೂಮಿಯ ಸ್ಥಿತಿ ಎಂದು ಬಣ್ಣಿಸಿದರು. 

ಕಾರ್ಯಕ್ರಮದಲ್ಲಿ ಗಾಯಕಿ ಪ್ರೇಮಲತಾ ಅವರು ಶಾಸ್ತ್ರೀಯ ಸಂಗೀತ ನಡೆಸಿಕೊಟ್ಟರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಎಂ.ಕೆ.ಹರೀಶ್, ಎಚ್.ಎಸ್.ಮುದ್ದೇಗೌಡ, ನಾಗರೇವಕ್ಕ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News