ಬೀದರ್: ಹಿಂಸಾಚಾರಕ್ಕೆ ತಿರುಗಿದ ಬಿಜೆಪಿ, ಸಂಘ ಪರಿವಾರದ ಪ್ರತಿಭಟನೆ

Update: 2018-01-30 16:28 GMT

ಬೆಂಗಳೂರು, ಜ. 30: ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ವಿದ್ಯಾರ್ಥಿಯೋರ್ವಳ ಹತ್ಯೆ ವಿರೋಧಿಸಿ ಬಿಜೆಪಿ ನೇತೃತ್ವದಲ್ಲಿ ಸಂಘ ಪರಿವಾರ ಮಂಗಳವಾರ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲೆಸೆದರು ಹಾಗೂ ಪೊಲೀಸ್ ಜೀಪಿಗೆ ಬೆಂಕಿ ಹಚ್ಚಿದರು. ಘಟನೆಯಲ್ಲಿ ಪೊಲೀಸ್ ಅಧೀಕ್ಷಕ, ಇಬ್ಬರು ಕಾನ್ ಸ್ಟೇಬಲ್ ಹಾಗೂ ಸಂಸದ ಭಗವಂತ್ ಖುಬಾ ಗಾಯಗೊಂಡಿದ್ದಾರೆ.

 ಮಂಗಳವಾರ ಬೀದರ್ ಬಂದ್‌ಗೆ ಕರೆ ನೀಡಿರುವ ಹಿಂದೂ ಹಿತರಕ್ಷಣಾ ವೇದಿಕೆ, ವಿದ್ಯಾರ್ಥಿನಿಯ ಹತ್ಯೆ ವಿರೋಧಿಸಿ ನಗರದ ಕೇಂದ್ರ ಭಾಗವಾದ ಅಂಬೇಡ್ಕರ್ ಚೌಕದ ಮೂಲಕ ಬೈಕ್ ರ್ಯಾಲಿ ನಡೆಸಲು ಅವಕಾಶ ನೀಡುವಂತೆ ಆಗ್ರಹಿಸಿತು.

ಬಿ.ಎ. ವಿದ್ಯಾರ್ಥಿನಿ ಪೂಜಾರನ್ನು 23 ವರ್ಷದ ಯುವಕನೋರ್ವ ಜನವರಿ 27ರಂದು ಹತ್ಯೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ. ಯುವತಿ ಹಾಗೂ ಯುವಕನ ನಡುವೆ ಕಳೆದ ಮೂರು ವರ್ಷಗಳಿಂದ ಗೆಳೆತನವಿತ್ತು. ಆದರೆ, ಅನಂತರ ಯುವತಿ ಕುಟುಂಬದ ಭಯದಿಂದ ಯುವಕನಿಂದ ದೂರ ಸರಿದಿದ್ದಳು ಎನ್ನಲಾಗುತ್ತಿದೆ.

 ಯುವಕ ಯುವತಿಯನ್ನು ಕಳೆದ ಒಂದು ತಿಂಗಳಿಂದ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಬೈಕ್‌ನಲ್ಲಿ ಹೋಗಿರುವುದು ಮನೆಯ ಹೊರಗಡೆ ಇದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಅನಂತರ ಕೋಸಮ್ ಗ್ರಾಮದ ಖಾನಾಪುರದ ಸಮೀಪದ ಕಾಡಿನಲ್ಲಿ ಪೂಜಾ ಅವರ ಮೃತದೇಹ ಪತ್ತೆಯಾಗಿತ್ತು. ಆರೋಪಿ ಯುವಕನ್ನು ಪೊಲೀಸರು ಬಂಧಿಸಿದ್ದರು.

  ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಎಬಿವಿಪಿ, ಇದನ್ನು ‘ಲವ್ ಜಿಹಾದ್’ ಎಂದು ಕರೆದಿತ್ತು. ಬುಧವಾರ ಪ್ರತಿಭಟನೆ ನಡೆಸಿದ ಪ್ರತಿಟನಕಾರರು ಜಿಲ್ಲಾ ಉಪ ಆಯುಕ್ತರ ಕಚೇರಿಯಲ್ಲಿ ಮನವಿ ಸಲ್ಲಿಸಲು ಬಯಸಿದರು.

ಆದಾಗ್ಯೂ, ನಗರದ ನಾಲ್ಕೈದು ಸ್ಥಳಗಳಿಂದ ಬೈಕ್ ರ್ಯಾಲಿ ಆರಂಭಿಸಿ ಅಂಬೇಡ್ಕರ್ ಚೌಕದಲ್ಲಿ ಸುಮಾರು 2 ಸಾವಿರ ಜನ ಸೇರುವುದಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇವರ ಜೊತೆಗೆ ಖುಬಾ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕೂಡ ಸೇರಿದ್ದರು.

ಬಳಿಕ ಪೊಲೀಸರು ಪ್ರತಿಭಟನಕಾರರು ಹಾಗೂ ಬಿಜೆಪಿ ಸದಸ್ಯರಿಗೆ ಗಂಟೆಗಳ ಕಾಲ ಮಾತುಕತೆ ನಡೆಸಲು ಅವಕಾಶ ನೀಡಿದರು. ಅನಂತರ ಐದು ಮಂದಿ ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.

 ಆದಾಗ್ಯೂ, ಮುಸ್ಲಿಂ ಪ್ರಾಬಲ್ಯದ ಪ್ರದೇಶವಾಗಿರುವ ಹಳೆ ಬಂದರು ಪ್ರದೇಶದ ಮೂಲಕ ರ್ಯಾಲಿಗೆ ಅವಕಾಶ ನೀಡುವಂತೆ ಪ್ರತಿಭಟನೆಕಾರರು ಬೇಡಿಕೆ ಇರಿಸಿದಾಗ ಪರಿಸ್ಥಿತಿ ಉದ್ವಿಗ್ನವಾಯಿತು. ಇದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದರು. ಆದರೆ, ಪ್ರತಿಭಟನಕಾರರು ಪಟ್ಟು ಬಿಡಲಿಲ್ಲ. ಈ ಸಂದರ್ಭ ಪ್ರತಿಭಟನಕಾರರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಯಿತು.

ಈ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲುಗಳನ್ನೆಸೆದರು ಹಾಗೂ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು. ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News