ಲಾಭದಾಯಕ ಹುದ್ದೆ ಪ್ರಕರಣ : ಚುನಾವಣಾ ಆಯೋಗದ ಪ್ರತಿಕ್ರಿಯೆ ಕೋರಿದ ದಿಲ್ಲಿ ಹೈಕೋರ್ಟ್

Update: 2018-01-30 17:07 GMT

ಹೊಸದಿಲ್ಲಿ, ಜ. 30: ಲಾಭದಾಯಕ ಹುದ್ದೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ಚುನಾವಣಾ ಆಯೋಗದ ಲಿಖಿತ ಪ್ರತಿಕ್ರಿಯೆ ಕೇಳಿದೆ. ದಿಲ್ಲಿ ವಿಧಾನ ಸಭೆಯ 20 ಶಾಸಕರನ್ನು ಅನರ್ಹಗೊಳಿಸುವ ಚುನಾವಣಾ ಆಯೋಗದ ಶಿಫಾರಸು ಪ್ರಶ್ನಿಸಿ ಆಪ್ ಶಾಸಕರು ಸಲ್ಲಿಸಿದ ಅರ್ಜಿಯನ್ನು ಸಂಜೀವ್ ಖನ್ನನ್ ಹಾಗೂ ಚಂದರ್ ಶೇಖರ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿತು.

ಮುಂದಿನ ವಿಚಾರಣೆ ಫೆಬ್ರವರಿ 7ರಂದು ನಡೆಯಲಿದೆ.

ಆಪ್ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯ ನೀಡುವುದಾಗಿ ಚುನಾವಣಾ ಆಯೋಗ ಇಂದು ನ್ಯಾಯಾಲಯದ ಮುಂದೆ ಹೇಳಿತು.

 ಉಪ ಚುನಾವಣೆಗೆ ಘೋಷಿಸಿ ಯಾವುದೇ ಅಧಿಸೂಚನೆ ಹೊರಡಿಸದಂತೆ ಈ ಹಿಂದೆ ನ್ಯಾಯಾಲಯ ನಿರ್ಬಂಧ ವಿಧಿಸಿತ್ತು. ಇದನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿತ್ತು.

 ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸದಂತೆ ಜನವರಿ 24ರ ವರೆಗೆ ನ್ಯಾಯಾಲಯದ ಏಕ ಸದಸ್ಯ ಪೀಠ ಸೋಮವಾರ ನಿರ್ಬಂಧ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News