ರಾಜಸ್ಥಾನ ಉಪಚುನಾವಣೆ: ಮಂಡಲ್ ಗರ್ ನಲ್ಲಿ ಕಾಂಗ್ರೆಸ್ ಜಯಭೇರಿ

Update: 2018-02-01 09:17 GMT

ರಾಜಸ್ಥಾನ, ಫೆ.1: ಮಂಡಲ್ ಗರ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದ್ದು, ಎರಡು ಲೋಕಸಭಾ ಕ್ಷೇತ್ರಗಳಾದ ಅಜ್ಮೀರ್ ಮತ್ತು ಆಲ್ವಾರ್ ನಲ್ಲಿ ಭಾರೀ ಮುನ್ನಡೆಯಲ್ಲಿದೆ.

ಕಾಂಗ್ರೆಸ್ ನ ಈ ಜಯ ವಸುಂಧರಾ ರಾಜೆ ಸರಕಾರಕ್ಕೆ ಭಾರೀ ಹೊಡೆತ ನೀಡಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಇದೇ ಸಂದರ್ಭ ಪಶ್ಚಿಮ ಬಂಗಾಳದಲ್ಲೂ ಮತ ಎಣಿಕೆ ನಡೆಯುತ್ತಿದ್ದು, ನೊಪಾರದಲ್ಲಿ ತೃಣಮೂಲ ಕಾಂಗ್ರೆಸ್ ಭಾರೀ ಅಂತರದಿಂದ ಜಯ ಗಳಿಸಿದೆ. ಉಲುಬೆರಿಯಾ ಲೋಕಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News