ಕರ್ನಾಟಕದ ಗಡಿ ಪ್ರದೇಶದ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಾಸಸ್ಥಾನ ಪ್ರಮಾಣಪತ್ರದ ಅಗತ್ಯವಿಲ್ಲ: ಮಹಾರಾಷ್ಟ್

Update: 2018-02-01 15:21 GMT

ಮುಂಬೈ, ಫೆ.1: ಕರ್ನಾಟಕದ ಮರಾಠಿ ಮಾತನಾಡುವ ಗಡಿ ಪ್ರದೇಶದಲ್ಲಿ ವಾಸಿಸುವ ವಿದ್ಯಾರ್ಥಿಗಳು ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣಕ್ಕೆ ದಾಖಲಾತಿ ಹೊಂದಲು ಕಡ್ಡಾಯವಾಗಿರುವ ವಾಸಸ್ಥಾನ ಪ್ರಮಾಣ ಪತ್ರವನ್ನು ನೀಡುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ಸರಕಾರ ತಿಳಿಸಿದೆ. ಈ ಬಗ್ಗೆ ಸರಕಾರಿ ನಿರ್ಣಯವನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯು ಇತ್ತೀಚೆಗೆ ಜಾರಿ ಮಾಡಿದೆ.

ಹಲವು ದಶಕಗಳಿಂದ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದದಲ್ಲಿ ಸಿಲುಕಿಕೊಂಡಿದೆ. ಸದ್ಯ ಕರ್ನಾಟಕದ ಭಾಗವಾಗಿರುವ 865 ಹಳ್ಳಿಗಳು ತನಗೆ ಸೇರಬೇಕೆಂದು ಮಹಾರಾಷ್ಟ್ರ ಹೇಳಿಕೊಂಡು ಬರುತ್ತಿದೆ.

ಸರಕಾರಿ ನಿರ್ಣಯದಂತೆ, ರಾಜ್ಯದ ಸರಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಸೀಟುಗಳನ್ನು ಮಹಾರಾಷ್ಟ್ರವು ಮರಾಠಿ ಮಾತನಾಡುವ ಕರ್ನಾಟಕದ ಗಡಿ ಪ್ರದೇಶಗಳ 865 ಹಳ್ಳಿಗಳ ವಿದ್ಯಾರ್ಥಿಗಳಿಗಾಗಿ ಮೀಸಲಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News