ಬಜೆಟ್‌ 2018: ಆಯುಷ್ ಇಲಾಖೆಗೆ ಶೇ.13ರಷ್ಟು ಹೆಚ್ಚುವರಿ ಅನುದಾನ

Update: 2018-02-01 17:59 GMT

ಹೊಸದಿಲ್ಲಿ, ಫೆ.1: ಕೇಂದ್ರ ಬಜೆಟ್‌ನಲ್ಲಿ ಆಯುಷ್ ಇಲಾಖೆಗೆ ನೀಡಲಾಗುವ ಅನುದಾನವನ್ನು ಶೇ.13ರಷ್ಟು ಹೆಚ್ಚಿಸಲಾಗಿದ್ದು, ಒಟ್ಟು 1,626.37 ಕೋಟಿ ರೂ. ಮೊತ್ತದ ಅನುದಾನ ಘೋಷಿಸಲಾಗಿದೆ.

ಈ ಹಿಂದಿನ ಸಾಲಿನ ಬಜೆಟ್‌ನಲ್ಲಿ ಆಯುಷ್ ಇಲಾಖೆಗೆ 1,429 ಕೋಟಿ ರೂ. ಅನುದಾನ ನೀಡಲಾಗಿತ್ತು. 2017-18ರ ಸಾಲಿನಲ್ಲಿ ಕೇಂದ್ರ ಸರಕಾರದ ಯೋಜನೆಗಳು ಹಾಗೂ ಹಂಚಿಕೆಗಳಿಗೆ ಒಟ್ಟು 68.66 ಕೋಟಿ ರೂ. ವೆಚ್ಚ ಎಂದು ನಿಗದಿಗೊಳಿಸಲಾಗಿದ್ದರೆ ಈ ವರ್ಷ 71.36 ಕೋಟಿ ರೂ. ನಿಗದಿಗೊಳಿಸಲಾಗಿತ್ತು. ಇದೀಗ ಈ ಮೊತ್ತವನ್ನು 87.64 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಶಾಸನಬದ್ಧ ಸಂಸ್ಥೆಗಳಾದ ಹೊಸದಿಲ್ಲಿಯಲ್ಲಿರುವ ಸೆಂಟ್ರಲ್ ಕೌನ್ಸಿಲ್ ಆಫ್ ಹೋಮಿಯೋಪಥಿ , ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್, ಸ್ವಾಯತ್ತ ಸಂಸ್ಥೆಗಳಾದ ಅಖಿಲ ಭಾರತ ಆಯುರ್ವೇದ ಸಂಸ್ಥೆ, ಆಯುರ್ವೇದಿಕ್ ವಿಜ್ಞಾನದ ಸಂಶೋಧನೆಯ ಕೇಂದ್ರೀಯ ಸಮಿತಿ ಮುಂತಾದ ಸಂಸ್ಥೆಗಳಿಗೆ ನೀಡುವ ಅನುದಾನವನ್ನು ಹೆಚ್ಚಿಸಲಾಗಿದೆ. ಶಾಸನಬದ್ಧ ಸಂಸ್ಥೆಗಳಿಗೆ ಈ ಹಿಂದೆ 7.99 ಕೋಟಿ ರೂ. ನೀಡಲಾಗಿದ್ದರೆ ಈಗ 9.60 ಕೋಟಿ ರೂ. ನಿಗದಿಗೊಳಿಸಲಾಗಿದೆ. ಸ್ವಾಯತ್ತ ಸಂಸ್ಥೆಗಳಿಗೆ ಈ ಹಿಂದೆ 804.30 ಕೋಟಿ ರೂ. ನೀಡಲಾಗಿದ್ದರೆ ಈಗ 906.70 ಕೋಟಿ ರೂ. ನಿಗದಿಗೊಳಿಸಲಾಗಿದೆ. ಔಷಧ ಮತ್ತು ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ ಕಳೆದ ವರ್ಷ 914.85 ಕೋಟಿ ರೂ. ನೀಡಲಾಗಿದ್ದರೆ, ಈಗ 1,041.14 ಕೋಟಿ ರೂ. ನಿಗದಿಯಾಗಿದೆ. ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿ ವೈದ್ಯ ವಿಧಾನಗಳ ಅಭಿವೃದ್ಧಿ, ಶಿಕ್ಷಣ ಹಾಗೂ ಸಂಶೋಧನೆ ಕಾರ್ಯವನ್ನು ಆಯುಷ್ ಇಲಾಖೆ ನಿರ್ವಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News