ಕಾರ್ಯಕ್ರಮಗಳ ಗುಣಮಟ್ಟ ಕಾಪಾಡುವುದು ಕಷ್ಟದ ಕೆಲಸ: ಡಾ.ಸಿ.ರಮೇಶ್

Update: 2018-02-02 16:50 GMT

ಚಿಕ್ಕಮಗಳೂರು, ಫೆ.2: ನಿರಂತರತೆಯ ಜೊತೆ ಕಾರ್ಯಕ್ರಮಗಳ ಗುಣ್ಣಮಟ್ಟವನ್ನು ಕಾಪಾಡುವುದು ತುಂಬಾ ಕಷ್ಟದ ಕೆಲಸ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಹೇಳಿದರು.

ಅವರು ಬೇಂದ್ರೆಯವರ ಜನ್ಮದಿನದ ಪ್ರಯುಕ್ತ ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಶ್ರೀ ಶೃಂಗೇರಿ ಶಂಕರವ್ಮಠದ ಪ್ರವಚನ ಮಂದಿರದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಮತ್ತು ಸುಗಮ ಸಂಗೀತಾ ಗಂಗಾ ಹಮ್ಮಿಕೊಂಡಿದ್ದ ಬೇಂದ್ರೆ ಕಾವ್ಯ ಗಾಯನವನ್ನು ಉದ್ಘಾಟಿಸಿ ಮಾತನಾಡಿದರು. ಎರಡನ್ನು ಅಚ್ಚುಕಟ್ಟಾಗಿ ಪೂರ್ವಿ ತಂಡ ಕಾಪಾಡಿಕೊಂಡು ಬರುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದರು.

ಸುಗಮ ಸಂಗೀತಾ ಗಂಗಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾಮತ್ ಮಾತನಾಡಿ, ಬೇಂದ್ರೆ ಅವರ ಬಹುಮುಖಿ ವ್ಯಕ್ತಿತ್ವದ ಬಗ್ಗೆ ವಿವರಿಸಿದರು. ಸುಮಾರು 1432 ಕವನಗಳನ್ನು ರಚಿಸಿದ್ದ ಬೇಂದ್ರೆಯವರು ಅರವಿಂದರಿಂದ ಪ್ರಭಾವಿತರಾಗಿ ಆಧ್ಯಾತ್ಮದ ಆಳಕ್ಕಿಳಿಯ ನಾಕುತಂತಿಯಂಥ ಕಾವ್ಯ ರಚಿಸಿದ್ದಾಗಿ ಹೇಳಿದರು. ಬಡತನದಲ್ಲಿದ್ದರೂ ಜೀವನ್ಮುಖೀ ವ್ಯಕ್ತಿತ್ವದಿಂದ ಎಲ್ಲರೊಂದಿಗೆ ಸರಳವಾಗಿ ಬೆರೆತು “ಸಮರಸವೇ ಜೀವನ’ ತತ್ವವನ್ನು ಕನ್ನಡಿಗರಿಗೆ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್.ಎಸ್.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. 

ಗಾಯಕರುಗಳಾದ ರೂಪ ಅಶ್ವಿನ್, ಅನೂಷಾ, ಅರ್ಚನಾ, ಲಾಲಿತ್ಯ, ಪ್ರಣಮ್ಯ, ಪ್ರಜ್ವಲ್, ಶ್ರೀ ಹರಿ, ಮೋಹನ್, ಶೃತಿ ಶ್ರೀಕಾಂತ್, ಅವರ ಗಾಯನ ಮನಸೆಳೆಯಿತು. ಎಂ.ಎಸ್.ಸುಧೀರ್ ಸ್ವಾಗತಿಸಿ, ರಾಯ್ ನಾಯಕ್ ವಂದಿಸಿದರು. ಸುಮಾ ಪ್ರಸಾದ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News