ಮಾತನಾಡುವ ತಿಮಿಂಗಿಲ
ಅದರ ತಲೆ ಸದಾ ನೀರಿನಿಂದ ಮೇಲೆ ಇರುತ್ತದೆ. ಅದರ ಹೆಸರು ವಿಕ್ಕಿ. ಅಪಾಯಕಾರಿಯಾದ ಈ ತಿಮಿಂಗಿಲ ಇನ್ನೊಂದು ಕೊಳದಲ್ಲಿರುವ ತರಬೇತುದಾರ ಮಾತನಾಡುವುದನ್ನೇ ಕಾಯುತ್ತಿರುತ್ತದೆ. ತರಬೇತುದಾರ ಹಲೋ ಎಂದಾಗ, ವಿಕ್ಕಿ ಕೂಡ ಹಲೋ ಎಂದು ಹೇಳುತ್ತದೆ.
ವಿಕ್ಕಿಗೆ ಮಾನವ ಭಾಷೆಯನ್ನು ಸಮರ್ಪಕವಾಗಿ ಪುನರುಚ್ಚರಿಸಲು ಸಾಧ್ಯವಾಗುವುದಿಲ್ಲ. ಆದರೆ, ಏನು ಹೇಳುತ್ತಿೆ ಎಂದು ಅರ್ಥ ಮಾಡಿಕೊಳ್ಳಬಹುದು.
ಇದು ತಿಮಿಂಗಿಲವೊಂದು ಮಾನವ ಭಾಷೆಯನ್ನು ಅನುಸರಿಸುತ್ತಿರುವ ಮೊದಲ ವೈಜ್ಞಾನಿಕ ಪ್ರದರ್ಶನ. ಇದು ಆ್ಯಮಿ (ವಿಕ್ಕಿಯ ತರಬೇತುದಾರ) ಬೈ...ಬೈ... ಹಾಗೂ 1,2,3 ವೊದಲಾದವುಗಳನ್ನು ಹೇಳುತ್ತದೆ.
‘‘ವಿಕ್ಕಿಯ ಮಾತು ಗಿಳಿಯಂತೆ ಮಾನವ ಭಾಷೆಗೆ ಪರಿಪೂರ್ಣವಾಗಿ ಹೋಲಿಕೆ ಆಗುವುದಿಲ್ಲ.’’ ಎಂದು ಮ್ಯಾಡ್ರಿಡ್‌ನ ಕಂಪ್ಲೂಟೆನ್ಸ್ ವಿಶ್ವವಿದ್ಯಾನಿಲಯದ ಸಂಶೋಧಕ ಜೋಸ್ ಅಬ್ರಾಂಸನ್ ತಿಳಿಸಿದ್ದಾರೆ.
ಸದ್ಯ ಆರು ವಿವಿಧ ಪದ ಹಾಗೂ ಪದಸಮುಚ್ಚಯಗಳಲ್ಲಿ ಕೆಲವನ್ನು ವಿಕ್ಕಿ ಸ್ಪಷ್ಟವಾಗಿ ಹೇಳುತ್ತಿದೆ ಎಂದು ಅಬ್ರಾಂಸನ್ ಹೇಳಿದ್ದಾರೆ.