ಮಂಡ್ಯ: ಅಂಗನವಾಡಿ ನೌಕರರಿಂದ ಬಜೆಟ್ ಭೂತ ದಹನ

Update: 2018-02-03 17:27 GMT

ಮಂಡ್ಯ, ಫೆ.3: ಕೇಂದ್ರ ಬಜೆಟ್ ಮಹಿಳೆ, ಮಕ್ಕಳ, ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ ವಿರೋಧಿಯಾಗಿದೆ ಎಂದು ಆರೋಪಿಸಿ ಅಂಗನವಾಡಿ ನೌಕರರು ನಗರದ ಮಹಾವೀರ ವೃತ್ತದಲ್ಲಿ ಶನಿವಾರ ಬಜೆಟ್ ಭೂತ ದಹನ ಮಾಡಿದರು.

ಅಂಗನವಾಡಿ ಮತ್ತು ಸ್ಕೀಂ ನೌಕರರಿಗೆ ವೇತನ ಹೆಚ್ಚು ಮಾಡದೆ ಐಸಿಡಿಎಸ್ ಯೋಜನೆಯನ್ನು ಬಲಹೀನ ಮಾಡಲು ಕೇಂದ್ರ ಸರಕಾರ ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಜೆಟ್‍ನಲ್ಲಿ ಐಸಿಡಿಎಸ್ ಉಳಿವಿಗೆ ಒತ್ತು ನೀಡದಿರುವುದು ಮಹಿಳೆ ಮತ್ತು ಮಕ್ಕಳ ವಿರೋಧಿ ನೀತಿಯಾಗಿದೆ. ನೌಕರರನ್ನು ಖಾಯಂಗೊಳಿಸದೆ ದುಡಿಸಿಕೊಳ್ಳುವುದು ಮುಂದುವರಿದಿದೆ ಎಂದು ಅವರು ಕಿಡಿಕಾರಿದರು.

ರಾಷ್ಟ್ರಪತಿ, ರಾಜ್ಯಪಾಲರು ಮತ್ತು ಸಂಸದರ ವೇತನ ಹೆಚ್ಚು ಮಾಡಲಾಗಿದೆ. ಆದರೆ, ಮಕ್ಕಳು ಮತ್ತು ಮಹಿಳೆಯರ ಅಭಿವೃದ್ಧಿಗೆ ದುಡಿಯುತ್ತಿರುವ ಅಂಗನವಾಡಿ ನೌಕರರ ವೇತನ ಹೆಚ್ಚಿಸಿಲ್ಲ. ತಮ್ಮ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಗೌರವಾಧ್ಯಕ್ಷೆ ಮಂಜುಳರಾಜ್, ಅಧ್ಯಕ್ಷೆ ಜಯಲಕ್ಷ್ಮಮ್ಮ, ಪ್ರಮೀಳಾ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News