ಗುಲಾಮಗಿರಿಯನ್ನು ರದ್ದುಗೊಳಿಸಿ ಘೋಷಣೆ

Update: 2018-02-03 18:44 GMT

* 2004: ಬೋಫೋರ್ಸ್ ಶಸ್ತ್ರಾಸ್ತ್ರ ಹಗರಣದ ಪ್ರಕರಣದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧದ ಲಂಚದ ಆರೋಪಗಳನ್ನು ದಿಲ್ಲಿ ಹೈಕೋರ್ಟ್ ವಜಾಗೊಳಿಸಿತು. 1980ರ ದಶಕದಲ್ಲಿ ಈ ಹಗರಣವು ದೇಶದಲ್ಲಿ ತಲ್ಲಣವನ್ನು ಸೃಷ್ಟಿಸಿತ್ತು. ಮರುವರ್ಷವೇ ಸಾಕ್ಷಾಧಾರಗಳ ಕೊರತೆಯಿಂದ ಹಿಂದುಜಾ ಸಹೋದರರು ಹಾಗೂ ಸ್ವೀಡನ್‌ನ ಎಬಿ ಬೋಫೋರ್ಸ್ ಕಂಪೆನಿಯ ವಿರುದ್ಧದ ಆರೋಪಗಳನ್ನೂ ಇದೇ ಕೋರ್ಟ್ ಕೈಬಿಟ್ಟಿತು.
 * 1783: ಇಟಲಿಯ ಕ್ಯಲಾಬ್ರಿಯಾ ಎಂಬಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸುಮಾರು 50,000 ಜನರು ಸಾವನ್ನಪ್ಪಿದರು. ಯುರೋಪಿನ ಪ್ರಮುಖ ಭೂಕಂಪನಗಳಲ್ಲಿ ಇದೂ ಒಂದು.
* 1794: ಫ್ರೆಂಚ್ ರಾಷ್ಟ್ರೀಯ ಸಮ್ಮೇಳನದಲ್ಲಿ ಗುಲಾಮಗಿರಿಯನ್ನು ರದ್ದುಗೊಳಿಸಿ ಘೋಷಣೆ ಹೊರಡಿಸಲಾಯಿತು.
* 1922: ಹೆಚ್ಚಿದ ಅಂತಾರಾಷ್ಟ್ರೀಯ ಒತ್ತಡ ಹಾಗೂ ಬಹಿಷ್ಕಾರದ ಕಾರಣ ಜಪಾನ್ ದೇಶವು ಚೀನಾದಿಂದ ವಶಪಡಿಸಿಕೊಂಡಿದ್ದ ಶಾನ್ ಟಂಗ್ ಪ್ರಾಂತವನ್ನು ಹಿಂದಿರುಗಿಸಿತು.
* 1933: ಜರ್ಮನ್ ಅಧ್ಯಕ್ಷ ಪಾಲ್ ವಾನ್ ಹಿಂಡನ್‌ಬರ್ಗ್ ಮಾಧ್ಯಮ ಸ್ವಾತಂತ್ರವನ್ನು ಮಿತಿಗೊಳಿಸಿದನು.
* 1945: ಅಮೆರಿಕ ಅಧ್ಯಕ್ಷ ರೂಸ್‌ವೆಲ್ಟ್, ಇಂಗ್ಲೆಂಡ್‌ನ ಚರ್ಚಿಲ್ ಹಾಗೂ ರಶ್ಯಾದ ಸ್ಟಾಲಿನ್ ವಿಶ್ವ ಎರಡನೇ ಮಹಾಯುದ್ಧ ಕೊನೆಯ ಹಂತದ ಬಗ್ಗೆ ಚರ್ಚಿಸಲು ಪರ್ಯಾಯ ದ್ವೀಪ ಕ್ರಿಮಿಯಾದಲ್ಲಿನ ಯಾಲ್ಟಾ ಎಂಬ ಪ್ರದೇಶದಲ್ಲಿ ಸಭೆ ಸೇರಿದರು.
* 1998: ಈಶಾನ್ಯ ಅಫ್ಘಾನಿಸ್ತಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 5,000 ಜನರ ಸಾವಿನ ವರದಿಯಾಯಿತು.

* 1938: ಪ್ರಮುಖ ಕಥಕ್ ನೃತ್ಯಗಾರ ಬಿರ್ಜು ಮಹಾರಾಜ್ ಜನ್ಮದಿನ. * 1974: ಭಾರತದ ಭೌತಶಾಸ್ತ್ರಜ್ಞ ಸತ್ಯೇಂದ್ರನಾಥ ಬೋಸ್ ನಿಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ