ವಿವಾದ ಸೃಷ್ಟಿಸಿದೆ ಪ್ರಧಾನಿಯ 'ಟಾಪ್' ಹೇಳಿಕೆಗೆ ರಮ್ಯಾರ 'ಪಾಟ್' ಪ್ರತಿಕ್ರಿಯೆ!

Update: 2018-02-05 09:22 GMT

ಹೊಸದಿಲ್ಲಿ, ಫೆ.5: ಪ್ರಧಾನಿ ನರೇಂದ್ರ ಮೋದಿ ರವಿವಾರ ಬೆಂಗಳೂರಿನ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ತಮ್ಮ ಸರಕಾರದ ಮುಖ್ಯ ಆದ್ಯತೆ ರೈತರಾಗಿದ್ದು (ಟಾಪ್ ಪ್ರಯಾರಿಟಿ) ಟಾಪ್ (TOP) ಅಂದರೆ ಟೊಮ್ಯಾಟೋ, ಆನಿಯನ್, ಪೊಟೆಟೋ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಮಾಜಿ ಸಂಸದೆ, ನಟಿ ರಮ್ಯಾ ಅವರು ಮಾಡಿರುವ ಟ್ವೀಟೊಂದು ವಿವಾದಕ್ಕೀಡಾಗಿದೆ.

"ಈಸ್ ದಿಸ್ ವಾಟ್ ಹ್ಯಾಪೆನ್ಸ್ ವೆನ್ ಯು ಆರ್ ಆನ್ ಪಾಟ್ ?''  (ನೀವು ನಶೆಯಲ್ಲಿರುವಾಗ ಹೀಗೆ ಆಗುತ್ತದೆಯೇ?) ಎಂದು ಪ್ರಧಾನಿಯನ್ನು ಪ್ರಶ್ನಿಸಿ ರಮ್ಯಾ ವಿವಾದ  ಸೃಷ್ಟಿಸಿದ್ದಾರೆ.

ರಮ್ಯಾ ಹೇಳಿಕೆಗೆ ನಿರೀಕ್ಷಿಸಿದಂತೆ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.  "ದೇಶದ ಹೆಚ್ಚಿನ ಜನರು ಹಾಗೂ ನಮ್ಮ ಪಕ್ಷ ಸದಸ್ಯರಿಗೆ (ಪ್ರಧಾನಿ ಸೇರಿ) ನೀವೇನು ಹೇಳುತ್ತಿದ್ದೀರೆಂದು ತಿಳಿಯುವುದಿಲ್ಲ. ನೀವು ಭಾರತದ ಜನರನ್ನು ಈ ರೀತಿಯ ಹೇಳಿಕೆಯಿಂದ ಅವಮಾನಿಸಿದ್ದರೆ ನಿಮ್ಮ ನಾಯಕ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ'' ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಪ್ರತಿಕ್ರಿಯಿಸಿದ್ದಾರೆ.

"ಕರ್ನಾಟಕದಲ್ಲಿ ದೇಶದಲ್ಲಿಯೇ ಅತ್ಯಧಿಕ, 3,500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಆದರೆ ಅವರಿಗಾಗಿ ಮಾತನಾಡುವುದು 'ಬೀಯಿಂಗ್ ಆನ್ ಪಾಟ್'(ನಶೆಯಲ್ಲಿದ್ದಂತೆ)'' ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಲವಿಯ ಟ್ವೀಟ್ ಮಾಡಿದ್ದಾರೆ.

"ಮಣಿಶಂಕರ್ ಅಯ್ಯರ್ ಅವರು ಗುಜರಾತ್ ಚುನಾವಣೆಗಿಂತ ಮೊದಲು ನೀಡಿದ್ದ 'ನೀಚ್'  ಹೇಳಿಕೆಗೆ ಅವರನ್ನು ಪಕ್ಷದಿಂದ ಹೊರಹಾಕಿದ್ದ ರಾಹುಲ್ ಗಾಂಧಿ ಈಗ ರಮ್ಯಾ ಅವರ ಹೇಳಿಕೆಯ ಬಗ್ಗೆ ಮೌನ ವಹಿಸುತ್ತಾರೆಯೇ?'' ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News