ಹಿಪ್ಪೇಮರ-ಜೀವನ ವೃತ್ತಾಂತ ಕಥನ

Update: 2018-02-07 18:47 GMT

ಸತ್ಯನಾರಾಯಣರಾವ್ ಅಣತಿಯವರ ‘ಹಿಪ್ಪೇಮರ’ (ಜೀವನ ವೃತ್ತಾಂತ ಕಥನ)- ಈ ವೃತ್ತಾಂತದ ವೈಶಿಷ್ಟವೆಂದರೆ, ಅಂದಿನ ಬದುಕಿನ ವಿವರಗಳನ್ನು, ಜೀವಂತಿಕೆಯನ್ನು ಇಂದಿನ ಪ್ರಬುದ್ಧ, ವೈಚಾರಿಕ, ಮಾಗಿದ ದೃಷ್ಟಿಕೋನದಿಂದ ನೋಡದೆ ಆವತ್ತಿನ ದೃಷ್ಟಿಕೋನ- ಮನೋಧರ್ಮದಿಂದಲೇ ನೋಡಿರುವುದು. ಈ ಕಾರಣಕ್ಕೆ ಬಡತನ, ಬದುಕಿನ ಕಷ್ಟ ಸುಖವನ್ನು ನಿರೂಪಿಸುವಾಗಲೂ ಬರವಣಿಗೆಯಲ್ಲಿ ಆತ್ಮ ಮರುಕವಿಲ್ಲ. ಓದುಗರಿಂದ ಮರುಕವನ್ನೂ ಬಯಸುವುದಿಲ್ಲ. ಬದಲಿಗೆ ಅದೂ ಕೂಡಾ ಒಂದು ಜೀವನ ಕ್ರಮವೇ ಎಂಬ ಉಲ್ಲಾಸದಿಂದಲೇ ಬರೆಯುತ್ತಾರೆ.

ವೈಚಾರಿಕ ಅಣತಿಯವರು ಪ್ರತಿಗಾಮಿ ಅರ್ಚಕರ ಮನೆಗೆ ಹೋಗುವುದು, ಇಬ್ಬರೂ ತಮ್ಮ ತಮ್ಮ ಮಿತಿ ಪೂರ್ವಾಗ್ರಹಗಳನ್ನು ಮೀರುವುದು, ಈ ಮೀರುವಿಕೆ ಪರಸ್ಪರ ಪೂರಕವಾಗುವುದು ಮನಕರಗಿಸುವಂತಿದೆ.

ಅಣತಿಯವರು ತಮ್ಮ ಸೃಜನಶೀಲ ಬರವಣಿಗೆಯ ಗತಿ ಮತ್ತು ಸಾಧನೆಯನ್ನು ಹಿರಿಯರಿಂದ ಒಡನಾಡಿಗಳಿಂದ ಬಂದ ಪ್ರತಿಕ್ರಿಯೆ ಪ್ರೋತ್ಸಾಹವನ್ನು ಕೂಡಾ ಈ ವೃತ್ತಾಂತದ ಉತ್ತರಾರ್ಧದಲ್ಲಿ ನಿರೂಪಿಸಿದ್ದಾರೆ. ಓದುಗರಿಗೆ ಇದೊಂದು ಸ್ವಗೀಳಿನ ಬರವಣಿಗೆಯೆಂದು ಎಲ್ಲೂ ಅನ್ನಿಸುವುದಿಲ್ಲ.
ಪ್ರತಿಯೊಂದು ಜೀವನ ವೃತ್ತಾಂತವೂ ತನ್ನದೇ ಆದ ವಿಶಿಷ್ಟತೆ ಮತ್ತು ಧ್ವನಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತದೆ. ಆತ್ಮರಂಜಕತೆಗೆ ಹೊರಳದಂತೆ, ವಿಶಿಷ್ಟತೆಯನ್ನು ಅಣತಿಯವರ ಈ ವೃತ್ತಾಂತ ಸಾಕ್ಷಾತ್ಕರಿಸಿಕೊಂಡಿದೆ.

-ಕೆ. ಸತ್ಯನಾರಾಯಣ ಅವರ ಬೆನ್ನುಡಿಯಿಂದ.

ಕಾಲ ಪ್ರಕಾಶನ, ರಾಜಾಜಿ ನಗರ, ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. 216 ಪುಟಗಳ ಕೃತಿಯ ಮುಖಬೆಲೆ 150 ರೂಪಾಯಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News