ಮೊಬೈಲ್‌ಗೆ ಬರಲಿದೆ ಎಸೆಸೆಲ್ಸಿ ಫಲಿತಾಂಶ

Update: 2018-02-11 16:32 GMT

ಬೆಂಗಳೂರು, ಫೆ.11: ಪ್ರಸಕ್ತ ಸಾಲಿನಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳ ಪ್ರವೇಶ ಪತ್ರ ಹಾಗೂ ಪರೀಕ್ಷಾ ಫಲಿತಾಂಶ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಾಗುವಂತೆ ಹಾಗೂ ಸಂದೇಶವನ್ನು ಅವರ ಪೋಷಕರ ಮೊಬೈಲ್ ಗೆ ರವಾನಿಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದೆ.

ಈ ಬಾರಿ 8.54 ಲಕ್ಷ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿ ಸಾಧನೆಯ ಟ್ರಾಕಿಂಗ್ ವ್ಯವಸ್ಥೆ ಕರ್ನಾಟಕ (ಎಸ್‌ಎಟಿಎಸ್) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅವುಗಳನ್ನು ಆಯಾ ಶಾಲೆಯ ಶಿಕ್ಷಕರು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಬಹುದಾಗಿದೆ.

ಮಾಹಿತಿಯಲ್ಲಿ ಲೋಪ ಕಂಡು ಬಂದರೆ, ಮುಖ್ಯ ಶಿಕ್ಷಕರು ವಿದ್ಯಾರ್ಥಿ ಸಾಧನೆಯ ಟ್ರಾಕಿಂಗ್ ವ್ಯವಸ್ಥೆ ಕರ್ನಾಟಕ (ಎಸ್‌ಎಟಿಎಸ್) ನಲ್ಲಿ ಫೆ.17 ರೊಳಗೆ ನಮೂದಿಸಬೇಕು. ಲೋಪ ಸರಿಪಡಿಸಿ ಎರಡು ದಿನಗಳಲ್ಲಿ ಪರಿಷ್ಕೃತ ಪ್ರವೇಶ ಪತ್ರವನ್ನು ಎಸ್‌ಎಟಿಎಸ್‌ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ ಎಂದು ಮಂಡಳಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News