9.3 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ತಮ್ಮಣ್ಣ ಚಾಲನೆ

Update: 2018-02-11 16:55 GMT

ಮದ್ದೂರು, ಫೆ.11: ಚನ್ನೇಗೌಡನದೊಡ್ಡಿ ಬಳಿ 57 ಲಕ್ಷ ರೂ. ವೆಚ್ಚದ ಒಂದೂವರೆ ಕಿ.ಮೀ. ಕೆಮ್ಮಣ್ಣು ನಾಲೆ ರಸ್ತೆ ಅಭಿವೃದ್ಧಿ ಸೇರಿದಂತೆ ತಾಲೂಕಿನ ವಿವಿಧ ಕಡೆ ಹಲವು ಅಭಿವೃದ್ಧಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಿ.ಸಿ.ತಮ್ಮಣ್ಣ ರವಿವಾರ ಚಾಲನೆ ನೀಡಿದರು.

ನಗರಕೆರೆ ಗ್ರಾಪಂ ವ್ಯಾಪ್ತಿಯ ಸೋಂಪುರದಲ್ಲಿ 50 ಲಕ್ಷ ರೂ. ವೆಚ್ಚದ 60 ಮೀಟರ್ ಉದ್ದದ ನಾಲೆಗೆ ಕಾಂಕ್ರಿಟ್ ಡೆಕ್ ನಿರ್ಮಾಣ, 1.5 ಕೋಟಿ ರೂ. ವೆಚ್ಚದ ಸೋಂಪುರ-ಉಪ್ಪಾರದೊಡ್ಡಿ-ಗುರುದೇವರಹಳ್ಳಿ ಮುಖ್ಯರಸ್ತೆ ಚರಂಡಿ, ಸಿಸಿ ಡೆಕ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಇದಲ್ಲದೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 85 ಲಕ್ಷ ರೂ. ವೆಚ್ಚದ ಸೋಂಪುರ ಗ್ರಾಮದೊಳಗಿನ ಸಿಸಿ ಚರಂಡಿ ಕಾಮಗಾರಿಗೂ ಚಾಲನೆ ನೀಡಿದ ತಮ್ಮಣ್ಣ, ಒಟ್ಟು 9.3 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಜೆಡಿಎಸ್ ಮೈಸೂರು ವಿಭಾಗದ ವೀಕ್ಷಕ ಎಸ್.ಬಿ.ಸ್ವಾಮಿ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕೆ.ಸ್ವಾಮಿ, ಜಿಪಂ ಸದಸ್ಯ ಮರಿಯಪ್ಪ, ತಾಪಂ ಸದಸ್ಯರಾದ ಮಂಜುಳಾ ಸೋಮಶೇಖರ್, ಚಿಕ್ಕಮರಿಯಪ್ಪ, ಗ್ರಾಪಂ ಅಧ್ಯಕ್ಷ ಹುಲಿಗೆರೆಪುರ ಮಹದೇವು, ಸದಸ್ಯರಾದ ಮಂಗಳ, ಮಹದೇವು, ಮುಖಂಡರಾದ ಚಂದ್ರಶೇಖರ್, ಉಮೇಶ್, ಪುಟ್ಟಮಾದಯ್ಯ, ಶಂಕರ್, ರಾಮು, ದೇವೇಗೌಡ, ಎಸ್.ಎಲ್.ಸುರೇಶ್, ರಾಮಕೃಷ್ಣ, ಮಲ್ಲರಾಜು, ಸುರೇಶ್, ಅಭಿಯಂತರೆ ತಾರಾ, ಇತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News