ಧಾರವಾಡ: ರಾಷ್ಟ್ರೀಯ ಯುನಾನಿ ದಿನಾಚರಣೆ

Update: 2018-02-12 12:43 GMT

ಧಾರವಾಡ, ಫೆ,12: ಆಯುಷ್ ವೈದ್ಯ ಪದ್ಧತಿಯು ಸಾಂಪ್ರದಾಯಕ ವೈದ್ಯ ಪದ್ಧತಿಗಳಾಗಿದ್ದು, ಈ ಪದ್ಧತಿಗಳಲ್ಲಿನ ಆಯುರ್ವೇದ, ಯೋಗ, ಯುನಾನಿ ಸಿದ್ಧ ಮತ್ತು ಹೋಮಿಯೋಪತಿ ಪದ್ಧತಿಯ ಚಿಕಿತ್ಸೆಗಳು ಮಾನವ ಸ್ವಾಸ್ಥ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಜೆ.ಟಿ.ಪವಾರ್ ಹೇಳಿದ್ದಾರೆ.

ನಗರದ ಜಿಲ್ಲಾ ಆಯುಷ್ ಅಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಯುನಾನಿ ವೈದ್ಯ ಪದ್ಧತಿಯ ಹೆಸರಾಂತ ವೈದ್ಯ ಹಕೀಂ ಅಫ್ಝಲ್ ಖಾನ್‌ರವರ 150ನೆ ಜನ್ಮದಿನದ ಅಂಗವಾಗಿ ಯುನಾನಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಯುನಾನಿ ವೈದ್ಯ ಪದ್ಧತಿಯ ಮಹತ್ವದ ಬಗ್ಗೆ ಯುನಾನಿ ವೈದ್ಯಾಧಿಕಾರಿಗಳಾದ ಡಾ.ರಾಬೀಯಾ ಸರಗಿರೊ ಮತ್ತು ಡಾ.ಸಫಾವನ್ ಉಪನ್ಯಾಸ ನೀಡಿದರು. ಎ.ಎಫ್.ಐ.ಅಧ್ಯಕ್ಷ ಡಾ.ಎಂ.ಎಸ್.ಕುಲಕರ್ಣಿ, ಡಾ. ಬಿ.ಪಿ.ಪೂಜಾರ್ ಸೇರಿದಂತೆ ಜಿಲ್ಲೆಯ ಎಲ್ಲ ಆಯುಷ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಧಾರವಾಡದಲ್ಲಿ ಜರುಗಿಸಿದ ರಾಷ್ಟ್ರೀಯ ಯುನಾನಿ ದಿನಾಚರಣೆ ನಿಮಿತ್ತ ಜಿಲ್ಲೆಯ ಎಲ್ಲ ಆಯುಷ್ ವೈದ್ಯಾಧಿಕಾರಿಗಳು ವಿವಿಧ ಸಂಘ ಸಂಸ್ಥೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಜಾಥಾವನ್ನು ಜಿಲ್ಲಾ ಸರಕಾರಿ ಆಯುರ್ವೇದ ಆಸ್ಪತ್ರೆಯಿಂದ ಕಿಲ್ಲಾ ರಸ್ತೆ ಮಾರ್ಗವಾಗಿ ಸಂಚರಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News