ದಾವಣಗೆರೆ: ನ್ಯಾಯಾಲಯದ ತೀರ್ಪಿಗೆ ಸಿಹಿ ಹಂಚಿ ಸ್ವಾಗತ

Update: 2018-02-17 17:31 GMT

ದಾವಣಗೆರೆ,ಫೆ.17: ಕಾವೇರಿ ನೀರು ಹಂಚಿಕೆ ಕುರಿತು ನ್ಯಾಯಾಲಯ ನೀಡಿದ ತೀರ್ಪಿಗೆ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದ ಜಯದೇವ ವೃತ್ತದಲ್ಲಿ ಸಾರ್ವಜನಿಕರಿಗೆ, ರೈತರಿಗೆ ಸಿಹಿ ಹಂಚಲಾಯಿತು.

ಈ ಸಂದರ್ಭ ಮಾತನಾಡಿದ ವಿಶ್ವ ಕ.ರ.ವೇ. ಯ ರಾಜ್ಯಾಧ್ಯಕ್ಷ ಕೆ.ಜಿ. ಯಲ್ಲಪ್ಪ, ಇಂದಿನ ಸರ್ವೋಚ್ಛ ನ್ಯಾಯಾಲಯದ ತೀರ್ಪು ಖುಷಿ ತಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾವೇರಿ ನಿರ್ವಹಣಾ ಮಂಡಳಿಯ ಸ್ಥಾಪನೆಯಾಗದಿರುವುದು ಕನ್ನಡಿಗರಿಗೆ ಸಂದ ಜಯ ಎಂದು ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅಮ್ಜದ್ ಅಲಿ, ರಾಜ್ಯ ಉಪಾಧ್ಯಕ್ಷ ನಾಗರಾಜ ಗೌಡ, ರಾಜ್ಯ ಸಂಚಾಲಕ ಮಂಜುನಾಥ್ ಗಂಗೂರು, ದಯಾನಂದ್ ಬಿ, ಸಂತೋಷ್ ಬಿ., ಸಿಕಂದರ್ ಹಜರತ್, ಮುನೀರ್ ಬಾಷಾ, ಅಜೀಂ, ಸೈಯದ್ ನಜೀರ್, ರಘು, ಬೀರಪ್ಪ, ಇರ್ಫಾನ್ ಇನ್ನಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News