ಸಿಆರ್‌ಪಿಎಫ್ ಅಧಿಕಾರಿಯ ಮೃತದೇಹ ತೊರೆಯಲ್ಲಿ ಪತ್ತೆ

Update: 2018-02-18 14:56 GMT
ಸಾಂದರ್ಭಿಕ ಚಿತ್ರ

ಶ್ರೀನಗರ, ಫೆ.18: ಸಿಆರ್‌ಪಿಎಫ್‌ನ ಸಹಾಯಕ ಉಪನಿರೀಕ್ಷರ ಮೃತದೇಹವು ಸಂಶಯಾಸ್ಪದ ರೀತಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿ ಬಳಿಯ ತೊರೆಯೊಂದರಲ್ಲಿ ಶನಿವಾರ ಪತ್ತೆಯಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಸಿಆರ್‌ಪಿಎಫ್‌ನ 177ನೇ ಬೆಟಾಲಿಯನ್‌ನಲ್ಲಿ ಎಎಸ್ಸೈ ಆಗಿದ್ದ ಹರಿಂದರ್ ಸಿಂಗ್ ಮೃತದೇಹವು ರಂಬನ್ ಜಿಲ್ಲೆಯ ಕೆಲಮೊರೆ ಎಂಬಲ್ಲಿ ತೊರೆಯಲ್ಲಿ ಪತ್ತೆಯಾಗಿದೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೊರ್ ವಸತಿಪ್ರದೇಶದಲ್ಲಿ ಸಿಂಗ್ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದರು ಎಂದು ಸೇನಾ ಮೂಲಗಳು ತಿಳಿಸಿವೆ.

ಸಿಂಗ್, ಶ್ರೀನಗರದಲ್ಲಿರುವ ಹುಮಹಮ ಸಹಕಾರಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರು. ಫೆಬ್ರವರಿ 14ರಂದು ಕರ್ತವ್ಯಕ್ಕೆ ಹಾಜರಾಗಿದ್ದ ಅವರು ನಂತರ ನಾಪತ್ತೆಯಾಗಿದ್ದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ನಂತರ ಸಿಆರ್‌ಪಿಎಫ್‌ಗೆ ಹಸ್ತಾಂತರಿಸಲಾಗುವುದು ಎಂದು ವೈದ್ಯರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News