ರಾಜಕೀಯ ಪಯಣಕ್ಕೆ ಕಮಲ್ ಚಾಲನೆ

Update: 2018-02-21 18:38 GMT

ರಾಮೇಶ್ವರಂ, ಫೆ. 21: ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಇಲ್ಲಿನ ನಿವಾಸಕ್ಕೆ ಭೇಟಿ ನೀಡುವ ಮೂಲಕ ನಟ ಕಮಲ್ ಹಾಸನ್ ಬುಧವಾರ ತನ್ನ ರಾಜಕೀಯ ಪಕ್ಷಕ್ಕೆ ಔಪಚಾರಿಕವಾಗಿ ಚಾಲನೆ ನೀಡಿದ್ದಾರೆ. ಮಧುರೈಯಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಪಕ್ಷದ ಹೆಸರು ಹಾಗೂ ಬಾವುಟ ಅನಾವರಣಗೊಳಿಸುವ ಮುನ್ನ ಕಮಲ್ ಹಾಸನ್ ಮಾಜಿ ರಾಷ್ಟ್ರಪತಿ ಅವರು ಹಿರಿಯ ಸಹೋದರ ಹಾಗೂ ಕುಟುಂಬದ ಸದಸ್ಯರನ್ನು ಇಲ್ಲಿನ ಅವರ ನಿವಾಸದಲ್ಲಿ ಭೇಟಿಯಾದರು.

‘‘ಸರಳ ಆರಂಭದಲ್ಲಿ ಶ್ರೇಷ್ಠತೆ ಬರುತ್ತದೆ’’ ಎಂದು ಅವರು ಹೇಳಿದರು.

‘‘ನಿಜವಾಗಿ ಶ್ರೇಷ್ಠತೆ ಕೇವಲ ಸರಳ ಆರಂಭದಿಂದ ಬರಬಹುದು. ಶ್ರೇಷ್ಠ ವ್ಯಕ್ತಿಯ ಸರಳ ನಿವಾಸದಿಂದ ನನ್ನ ಯಾತ್ರೆ ಆರಂಭಿಸುತ್ತಿರುವ ಬಗ್ಗೆ ಹೆಮ್ಮೆ ಆಗುತ್ತಿದೆ’’ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ. ಆದಾಗ್ಯೂ, ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಲಾಂ ಅವರು ಶಿಕ್ಷಣ ಪಡೆದ ಮಂಡಪಂನಲ್ಲಿರುವ ಸರಕಾರಿ ಶಾಲೆಗೆ ಭೇಟಿ ನೀಡುವ ಕಾರ್ಯಕ್ರಮ ರದ್ದುಗೊಳಿಸಲಾಯಿತು. ಕಮಲ್ ಹಾಸನ್ ಈ ಶಾಲೆಗೆ ಭೇಟಿ ನೀಡುವುದನ್ನು ನಾವು ವಿರೋಧಿಸುತ್ತೇವೆ. ಅವರು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಬೇರೇನೂ ಇಲ್ಲ ಎಂದು ಹಿಂದೂ ಸಂಘಟನೆಯೊಂದರ ನಾಯಕರೊಬ್ಬರು ತಿಳಿಸಿದ್ದಾರೆ. ಕಮಲ್ ಹಾಸನ್ ಅನಂತರ ರಾಮೇಶ್ವರಂನಲ್ಲಿ ಮೀನುಗಾರ ಸಮುದಾಯದವರೊಂದಿಗೆ ಮಾತನಾಡಿ, ಇದು ತಮಿಳುನಾಡಿನ ಅತಿ ಮುಖ್ಯವಾದ ಉದ್ಯಮ ಎಂದರು.

ಮೀನುಗಾರರ ಸಲಹೆಗಳನ್ನು ಕೇಳಲು ತಾನು ಮತ್ತೆ ಇಲ್ಲಿಗೆ ಬರುತ್ತೇನೆ ಎಂದು ಹೇಳಿದರು. ರಾಮೇಶ್ವರದಲ್ಲಿ ಹಾರಾಡುತ್ತಿರುವ ಧ್ವಜಗಳು ಬಿಳಿ ಬಣ್ಣದಾಗಿದ್ದು, ಅದರಲ್ಲಿ ಕಪ್ಪು ಬಣ್ಣದಲ್ಲಿ ತಮಿಳುನಾಡಿನ ನಕ್ಷೆ ಮುದ್ರಿಸಲಾಗಿದೆ. ಅಲ್ಲದೆ ‘‘ನಾಳೆ ನಮ್ಮದು’’ ಎಂಬ ಅರ್ಥ ಸ್ಪುರಿಸುವ ‘ನಾಳೈ ನಮದೈ’ ಎಂದು ಬರೆಯಲಾಗಿದೆ. ಯಾರೋ ಒಬ್ಬರ ವಿರುದ್ಧ ಸ್ಪರ್ಧಿಸಲು ಕಮಲ್ ಹಾಸನ್ ರಾಜಕೀಯ ಪಕ್ಷ ಆರಂಭಿಸಿದ್ದಾರೆ ಎಂದು ಕಾಣುತ್ತದೆ ಎಂದು ಬಿಜೆಪಿಯ ತಮಿಳುನಾಡು ಘಟಕದ ನಾಯಕ ತಮಿಳಿಸಾಯಿ ಸೌಂದರರಾಜನ್ ಹೇಳಿದ್ದಾರೆ. ಕಮಲ್ ಹಾಸನ್ ಹಾಗೂ ರಜನಿಕಾಂತ್ ತಮಿಳುನಾಡಿನಲ್ಲಿ ಡಿಎಂಕೆಗೆ ತೊಂದರೆ ಉಂಟು ಮಾಡಲು ಬಿಜೆಪಿ ನಿಯೋಜಿತ ಏಜೆಂಟರು ಎಂದು ದಲಿತ ಪಕ್ಷದ ನಾಯಕ ತೋಲ್ ತಿರುಮಾವಲನ್ ಹೇಳಿದ್ದಾರೆ.

ಕಲಾಂ ಮನೆ ಭೇಟಿಯಲ್ಲಿ ರಾಜಕೀಯವಿಲ್ಲ

ರಾಮೇಶ್ವರಂ: ರಾಷ್ಟ್ರಪತಿ ಕಲಾಂ ಅವರ ಇಲ್ಲಿನ ನಿವಾಸಕ್ಕೆ ಭೇಟಿ ನೀಡಿರುವುದರಲ್ಲಿ ಹಾಗೂ ಅವರ ಶಾಲೆಗೆ ಭೇಟಿ ನೀಡುವ ಪ್ರಸ್ತಾಪದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ನಟ ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ. ‘‘ನನಗೆ ಕಲಾಂ ಬಹುಮುಖ್ಯ ವ್ಯಕ್ತಿ. ನಾನು ಅವರ ದೇಶಭಕ್ತಿ ಹಾಗೂ ಮಹತ್ವಾಕಾಂಕ್ಷೆಯ ಬಗ್ಗೆ ಆಕರ್ಷಿತನಾಗಿದ್ದೆ. ಅವರ ನಿವಾಸಕ್ಕೆ ಭೇಟಿ ನೀಡಿರುವುದರಲ್ಲಿ ಯಾವುದೇ ರಾಜಕೀಯ ಇಲ್ಲ’’ ಎಂದು ಅವರು ಹೇಳಿದ್ದಾರೆ. ‘‘ಅವರ ಶಾಲೆಗೆ ಭೇಟಿ ನೀಡಲು ಉದ್ದೇಶಿಸದ ಬಗ್ಗೆ ಕೂಡ ಯಾವುದೇ ರಾಜಕೀಯ ಇಲ್ಲ.

ಶಾಲೆಗೆ ಭೇಟಿ ನೀಡುವುದನ್ನು ಜಿಲ್ಲಾಡಳಿತ ತಡೆಯಿತು. ಆದರೆ, ಅವರ ಜೀವನದಿಂದ ಕಲಿಯುವುದರಿಂದ ಅಲ್ಲ’’ ಎಂದು ಅವರು ಹೇಳಿದ್ದಾರೆ. ‘‘ಸಿನೆಮಾ ಜನರ ನಡುವಿನ ಕೊಂಡಿ. ಅದೇ ರೀತಿ ರಾಜಕೀಯ ಕೂಡ. ಆದರೆ, ರಾಜಕಾರಣಿಗೆ ಅತ್ಯಧಿಕ ಜವಾಬ್ದಾರಿ ಇರುತ್ತದೆ. ಇದು ವಿನಿಮಯ ಪದ್ಧತಿಯಂತೆ (ಸಿನೆಮಾ). ನನ್ನ ಪ್ರತಿಭೆಗೆ ಹಣ ನೀಡಲಾಗುತ್ತದೆ. ಆದರೆ, ಇಲ್ಲಿ (ರಾಜಕೀಯ) ಅದಿಲ್ಲ’’ ಎಂದು ಕಮಲ್ ಹಾಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News