ಹನೂರು: ನೂತನವಾಗಿ ನ್ಯಾಯಾಲಕ್ಕೆ ಸ್ಥಳ ಪರಿಶೀಲನೆ

Update: 2018-02-22 12:23 GMT

ಹನೂರು,ಫೆ.22 : ಪಟ್ಟಣದಲ್ಲಿ ನೂತನವಾಗಿ ನ್ಯಾಯಾಲವನ್ನು ಪ್ರಾರಂಭಿಸುವ ಉದ್ದೇಶದಿಂದ ಮಾನ್ಯ ಹೆಚ್ಚುವರಿ ಜಿಲ್ಲಾ ಸೇಸನ್ಸ್ ನ್ಯಾಯಾದೀಶರಾದ ವಿನಯ್‍ರವರು ಮತ್ತು ಕೂಳ್ಳೇಗಾಲದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾದೀಶರಾದ ಕೃಷ್ಣರವರು ಪಟ್ಟಣಕ್ಕೆ ಇಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೂಂದಿಗೆ ಮಾತನಾಡಿದ ಮಾನ್ಯ ಹೆಚ್ಚುವರಿ ಜಿಲ್ಲಾ ಸೇಸನ್ಸ್ ನ್ಯಾಯದೀಶರಾದ ವಿನಯ್‍, ಸಾರ್ವಜನಿಕರ ಹಿತಾದೃಷ್ಟಿಯಿಂದ ಹನೂರು ಪಟ್ಟಣದಲ್ಲಿ ನೂತನವಾಗಿ ನ್ಯಾಯಾಲವನ್ನು ತೆರೆಯಲು ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣ, ರೇಷ್ಮೆ ಇಲಾಖೆಯ ಕಟ್ಟಡ, ಆರ್ ಎಂ ಸಿ ಮುಂಭಾಗ ವಿರುವ ಖಾಸಗಿ ಕಟ್ಟಡ, ಮತ್ತು ಈ ಹಿಂದೆ ಮಾರುತಿ ಚಿತ್ರ ಮಂದಿರವಾಗಿ ಇದ್ದು ಪ್ರಸ್ತುತ ಸ್ಥಗಿತಗೂಂಡಿರುವ ಕಟ್ಟಡವನ್ನು ಈಗಾಗಲೇ ಪರಿಶೀಲನೆ ನೆಡಸಲಾಗಿದ್ದು, ಈ ಸಂಬಂದ ಸಂಪೂರ್ಣ ವರದಿಯನ್ನು ಉಚ್ಚ ನ್ಯಾಯಾಲಕ್ಕೆ ಸಲ್ಲಿಸಲಾಗುವುದು ಅನಂತರ ಮುಂದಿನ ಪ್ರಕ್ರಿಯೆ ಕೈಗೂಳ್ಳಲಾಗುವುದು ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಕೂಳ್ಳೇಗಾಲ ವಕೀಲರ ಸಂಘದ ಕಾರ್ಯದರ್ಶಿ ಬಸವರಾಜು, ಹಿರಿಯ ವಕೀಲರಾದ ಎಸ್ ನಾಗರಾಜು, ಎನ್ ರಾಧಕೃಷ್ಣ  ಪ್ರದೀಪ್, ಆಶೋಕ್, ಪ್ರಕಾಶ್ ,ಸಂಪತ್‍ಕುಮಾರ್, ಹೇಮಂತ್‍ಕುಮಾರ್ ಇನ್ನಿತರರು ಹಾಜರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News