ಪ್ಲೂಟೊಗೆ ಗ್ರಹದ ಸ್ಥಾನಮಾನ ಮರಳಿ ನೀಡುವಂತೆ ನಾಸಾಗೆ ಪತ್ರ ಬರೆದ ಬಾಲಕಿ

Update: 2018-02-24 11:41 GMT

ಕಳೆದ ದಶಕದವರೆಗೂ ಪ್ಲೂಟೊ ಸೌರ ವ್ಯೂಹದ ಒಂಬತ್ತು ಗ್ರಹಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿತ್ತು. ಆದರೆ ಪ್ಲೊಟೊವಿನ ಗ್ರಹದ ಸ್ಥಾನಮಾನವನ್ನು 2006ರಲ್ಲಿ ಕಸಿದು ಕೊಳ್ಳಲಾಗಿತ್ತು. ಆದರೆ ಅದು ಸರಿಯಲ್ಲವೆಂದು ಐಯರ್‌ಲ್ಯಾಂಡ್‌ನ ಪುಟ್ಟ ಬಾಲಕಿ ಕಾರಾಳ ವಾದವಾಗಿದೆ. ಹೀಗಾಗಿ ಆಕೆ ತನ್ನ ಶಿಕ್ಷಕಿಯ ನೆರವು ಪಡೆದು, ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾಗೆ ಪತ್ರವೊಂದನ್ನು ಬರೆದಿದ್ದಾಳೆ. ಪ್ಲೂಟೊವನ್ನು ಗ್ರಹವೆಂದು ಪರಿಗಣಿಸಿ ಎಂದ ಆಕೆ ತನ್ನ ಪತ್ರದಲ್ಲಿ ನಾಸಾಗೆ ಮನವಿ ಮಾಡಿದ್ದಾಳೆ.

ತಾನು ಇತ್ತೀಚೆಗೆ ಆಲಿಸಿದ ಹಾಡೊಂದರ ಕೊನೆಯ ಸಾಲು ಬ್ರಿಂಗ್ ಪ್ಲೂಟೊ ಬ್ಯಾಕ್ (ಪ್ಲೂಟೊವನ್ನು ಮರಳಿ ತನ್ನಿ) ಎಂದಾಗಿತ್ತು. ಪ್ಲೂಟೊಗೆ ಗ್ರಹದ ಸ್ಥಾನಮಾನ ನೀಡಬೇಕೆಂಬ ಆಶಯವಿರುವ ಈ ಹಾಡಿನಿಂದ ತಾನು ಪ್ರಭಾವಿತಳಾಗಿದ್ದು, ಈಗ ಅದು ನಿಜವಾಗುವುದನ್ನು ಬಯಸಿದ್ದೇನೆಂದು ಈ ಮುಗ್ಧ ಬಾಲಕಿ ಪತ್ರದಲ್ಲಿ ಹೇಳಿಕೊಂಡಿದ್ದಾಳೆ.

2006ರಲ್ಲಿ ಪ್ಲೂಟೊವನ್ನು ಸೌರವ್ಯೆಹದ 9ನೇ ಗ್ರಹವೆಂಬ ಸ್ಥಾನಮಾನವನ್ನು ಕಸಿದು ಕೊಳ್ಳಲಾಗಿತ್ತು ಹಾಗೂ ಅದನ್ನು ಕುಬ್ಜಗ್ರಹವೆಂದು ಪರಿಗಣಿಸಲಾಗಿತ್ತು. ಆದರೆ ಕಾರಾ, ಪ್ಲೂಟೊ ಮತ್ತೊಮ್ಮೆ ಬುಧ, ಶುಕ್ರ, ಭೂಮಿ, ಮಂಗಳ, ಗುರು, , ಶನಿ, ಯುರೇನಸ್, ನೆಪ್ಚೂನ್‌ನಂತೆ ಮುಖ್ಯ ಗ್ರಹವೆಂಬ ಮಾನ್ಯತೆ ಪಡೆಯಬೇಕೆನ್ನುತ್ತಾಳೆ.

ಖಗೋಳಶಾಸ್ತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಕಾರಾ ದೊಡ್ಡವಳಾದ ಬಳಿಕ ನಾಸಾದ ಗಗನಯಾತ್ರಿಯಾಗಬೇಕೆಂಬ ಕನಸು ಕಾಣುತ್ತಿದ್ದಾಳೆ. ಸೌರವ್ಯೂಹದ ಅಂಚಿನಲ್ಲಿರುವ ಪ್ಲೂಟೊವರೆಗೂ ಪ್ರಯಾಣಿಸಬೇಕೆಂಬ ಕನಸನ್ನು ಆಕೆ ಕಾಣುತ್ತಿದ್ದಾಳೆ.
 

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News

ಜಗದಗಲ
ಜಗ ದಗಲ