ರಿಯಾಲಿಟಿ ಶೋಗಳಲ್ಲಿ ಮಕ್ಕಳ ಸುರಕ್ಷತೆಗೆ ಕ್ರಮಗಳ ಬಗ್ಗೆ ಕೇಳಿದ ಮಹಿಳಾ ಆಯೋಗ

Update: 2018-02-24 17:06 GMT

ಮುಂಬೈ,ಫೆ.24: ಬಾಲಸ್ಪರ್ಧಿಗಳ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸುವಂತೆ ಸೂಚಿಸಿ ಗಾಯಕ ಅಂಗರಾಜ ಪಪೋನ್ ಮಹಂತ ಅವರ ಕಾರ್ಯಕ್ರಮದ ನಿರ್ಮಾಪಕರಿಗೆ ನೋಟಿಸೊಂದನ್ನು ಮಹಾರಾಷ್ಟ್ರ ರಾಜ್ಯ ಮಹಿಳೆಯರ ಹಕ್ಕುಗಳ ಆಯೋಗವು ಜಾರಿಗೊಳಿಸಲಿದೆ.

ಕಾರ್ಯಕ್ರಮದ ಸೆಟ್‌ಗಳಲ್ಲಿ ಹೋಳಿ ಆಚರಣೆ ಸಂದರ್ಭ ಪಪೋನ್ ಅವರು ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳನ್ನು ಅನುಚಿತ ರೀತಿಯಲ್ಲಿ ಚುಂಬಿಸಿದ್ದ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಯೋಗವು ಮುಂದಾಗಿದೆ. ಶನಿವಾರ ಇಲ್ಲಿ ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದ ಆಯೋಗದ ಅಧ್ಯಕ್ಷೆ ವಿಜಯಾ ರಾಹತ್ಕರ್ ಅವರು, ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುವ ಮಕ್ಕಳ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ನಿರ್ಮಾಪಕರ ಹೊಣೆಗಾರಿಕೆ ಯಾಗಿದೆ. ವ್ಯಕ್ತಿಯೊಂದಿಗೆ ಮಾತನಾಡುವ ಬದಲು ಈ ಬಗ್ಗೆ ನಿರ್ಮಾಪಕರನ್ನು ಪ್ರಶ್ನಿಸಲು ನಾವು ಬಯಸಿದ್ದೇವೆ ಎಂದರು.

ಘಟನೆಯ ಕುರಿತಂತೆ ಪೊಲಿಸರು ಪೊಸ್ಕೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News