ಮೆಕ್ಸಿಕೊದಲ್ಲಿ ಜಲಾಂತರ್ಗತ ಬೃಹತ್ ಗುಹೆಗಳು ಪತ್ತೆ
ಜಗತ್ತಿನ ಅತೀ ದೊಡ್ಡ ನೀರಿನಡಿಯ ಗುಹೆಗಳನ್ನು ಪುರಾತತ್ವತಜ್ಞರು ಇತ್ತೀಚೆಗೆ ಮೆಕ್ಸಿಕೊದಲ್ಲಿ ಪತ್ತೆಹಚ್ಚಿದಾ್ದರೆ. ಯುಕಾಟನ್ ಪರ್ಯಾಯ ದ್ವೀಪದಲ್ಲಿಜಲಾಂತರ್ಗತ ಗುಹೆಗಳ ಎರಡು ದೊಡ್ಡ ಜಾಲಗಳು ಕಳೆದ ತಿಂಗಳು ಪತ್ತೆಯಾಗಿವೆ. ಸ್ಯಾಕ್ ಅಕ್ಟುನ್ ಹಾಗೂ ಡೊಸ್ ಒಜೊಸ್ ಎಂದು ಹೆಸರಿಡಲಾದ ಈ ಎರಡು ಜಲಾಂತರ್ಗತ ಗುಹೆಗಳು, ವಸ್ತುಶಃ ಒಂದಕ್ಕೊಂದು ಸಂಪರ್ಕಿಸಲ್ಪಟ್ಟಿದೆ. ಈ ಗುಹೆಗಳಲ್ಲಿ ದೈತ್ಯಗಾತ್ರದ ಸ್ಲೊತ್ (ಈಗ ನಾಶಗೊಂಡಿರುವ ಆನೆಗಾತ್ರದ ಪ್ರಾಣಿ ಪ್ರಭೇದ)ಗಳ ಪಳೆಯುಳಿಕೆಗಳು ಪತ್ತೆಯಾಗಿವೆ.
ಆಮ್ಲಜನಕದ ಸಿಲಿಂಡರ್ ಸಹಿತವಾದ ಸ್ಕೂಬಾ ಉಡುಗೆಗಳನ್ನು ಧರಿಸಿ, ಈ ಜಲಾಂತರ್ಗತ ಗುಹೆಗಳ ಶೋಧಕಾರ್ಯದಲ್ಲಿ ತಜ್ಞರು ನಿರತರಾಗಿದ್ದಾರೆ. ಮೆಕ್ಸಿಕೊದ ರಾಷ್ಟ್ರೀಯ ಮಾನವಶಾಸ್ತ್ರ ಹಾಗೂ ಇತಿಹಾಸ ಸಂಸ್ಥೆಯು ಈ ಅನ್ವೇಷಣೆಯನ್ನು ಪ್ರಾಯೋಜಿಸಿತ್ತು. ಗುಹೆಗಳಲ್ಲಿನ ನೀರಿನ ಮಟ್ಟವು ಕಾಲದಿಂದ ಕಾಲಕ್ಕೆ ಬದಲಾವಣೆಯಾಗುತ್ತಲೇ ಇದೆ. ಭೀಕರ ಬರಗಾಲದ ಸಂದರ್ಭದಲ್ಲಿ ಈ ಗುಹೆಗಳು ಪ್ರಾಣಿಗಳಿಗೆ ನೀರಿನ ಸೆಲೆಗಳಾಗಿದ್ದವು ಎಂದು ತಜ್ಞರು ಹೇಳಿದ್ದಾರೆ. ಈ ಗುಹೆಯೊಳಗೆ ಪ್ರವೇಶಿಸಿದ ಅದೆಷ್ಟೊ ಪ್ರಾಣಿಗಳು ಹಾಗೂ ಮಾನವರು ಜೀವಂತವಾಗಿ ಮರಳಲಾಗದೆ ಶವವಾಗಿದ್ದಾರೆ. ಇಂದು ಅವರ ಅವಶೇಷಗಳು ವಿಜ್ಞಾನಿಗಳಿಗೆ ಅಧ್ಯಯನದ ವಸ್ತುಗಳಾಗಿವೆ. ಈ ಗುಹೆಗಳು 20 ಲಕ್ಷ ವರ್ಷಗಳಷ್ಟು ಪುರಾತನವಾದುವೆಂದು ವಿಜ್ಞಾನಿಗಳು ಊಹಿಸಿದ್ದಾರೆ.
ಈ ಗುಹೆಯಲ್ಲಿ ಮಯಾ ನಾಗರಿಕತೆ ಕಾಲದ ಆರಾಧನಾಲಯವೊಂದು ಪತ್ತೆಯಾಗಿದೆ. ಈ ಗುಹೆಯಲ್ಲಿ ಮಾನವರು ಬಿಟ್ಟುಹೋಗಿರುವ ಕೆಲವು ಕಲಾಕೃತಿಗಳಲ್ಲದೆ, ಸುಟ್ಟುಹಾಕಲಾದ ಮಾನ ವ ಮೂಳೆಗಳೂ ಕಂಡುಬಂದಿವೆ.