ಭಾರತದ ಇತರೆ ಭಾಷೆಗಳಿಗಿಂತ ಕನ್ನಡ ಸರಳ, ಸುಂದರ ಭಾಷೆ: ಎಲ್.ಟಿ.ಪಾಟೀಲ್

Update: 2018-02-25 17:10 GMT

ಮುಂಡಗೋಡ,ಫೆ.25: ಆಂಗ್ಲ ಭಾಷೆಗೆ ಮಾರು ಹೋಗದೆ ಕನ್ನಡ ಭಾಷೆ ನುಡಿ ಉಳಿಸುವ ನಿಟ್ಟಿನಲ್ಲಿ ಸಾಗಬೇಕು ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಟಿ.ಪಾಟೀಲ್ ಹೇಳಿದರು.

ಅವರು ಭಾನುವಾರ ಮುಂಡಗೋಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ದೈವಜ್ಞ ಕೊಆಪ್‍ರೇಟಿವ್ ಕ್ರೇಡಿಟ್ ಸೊಸೈಟಿ ಸಂಯುಕ್ತಶ್ರಾಯದಲ್ಲಿ ವಿವೇಕಾನಂದ ಬಯಲು ಮಂಟಪದಲ್ಲಿ ಹಮ್ಮಿಕೊಂಡಿರುವ ವಾದಿರಾಜ ನಮನ ಹಾಗೂ ಸಾಹಿತ್ಯ ಸಂಭ್ರಮದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿರುವ ಎಲ್ಲಾ ಭಾಷೆಗಳಿಗಿಂತ ಚಂದದ ಭಾಷೆ ಕನ್ನಡ. ಸುಂದರ ಅಕ್ಷರಗಳು ಇರುವ ಕನ್ನಡ ಭಾಷೆ ಮಾತನಾಡಲೂ ಸಹ ಸರಳವಾಗಿದೆ. ಕನ್ನಡದ ಕವಿಗಳು ಜ್ಞಾನಪೀಠ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಲ್ಲಿ ಕನ್ನಡದ ಕಂಪು ಹರಡಿದ್ದಾರೆ. ಆಂಗ್ಲಭಾಷಯ ವ್ಯಾಮೋಹದಿಂದಾಗಿ ನಾವೆಲ್ಲರೂ ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿಲ್ಲದಿರುವುದು ದುರದೃಷ್ಟಕರ ಎಂದರು. 

ಮುಂಡಗೋಡ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗೇಶ ಪಾಲನಕರ ಮಾತನಾಡಿ, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡದ ಕಂಪನ್ನು ತಾಲೂಕಿನಾಧ್ಯಂತ ಹರಡುತ್ತಿರುವುದು ಸಂತೋಷದ ಸಂಗತಿ. ಕಸಾಪ ಅಧ್ಯಕ್ಷ ರು ಕನ್ನಡ ಭಾಷೆಯ ಅಭಿವೃದ್ದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ತಾವು ಸಹಕಾರ ನೀಡುವುದಾಗಿ ಹೇಳಿದರು. ವಾದಿರಾಜ ಮಹರಾಜರ ಕಾರ್ಯಗಳನ್ನು ನಾವು ಮೈಗೊಡಿಸಿಕೊಂಡು ಸಮಾಜದಲ್ಲಿ ಬಾಳಿದರೆ ಅದು ಅವರಿಗೆ ಕೊಡುವ ಗೌರವ ಎಂದರು.

ಕಾರ್ಯಕ್ರಮದಲ್ಲಿ ಸುಭಾಸ ಡೋರಿ, ರಾಮಣ್ಣ ಪಾಲೇಕರ,ಎಸ್.ಬಿ.ಹೂಗಾರ, ಡಿ.ಜೆ.ಕುಲಕರ್ಣಿ, ಕಾತೂರ ಸರಕಾರಿ ಪ್ರೌಡಶಾಲೆಯ ಮುಖ್ಯೋದ್ಯಾಪಕ ದಯಾನಂದ ನಾಯ್ಕ ಮಾತನಾಡಿದರು.

ವೇದಿಕೆ ಮೇಲೆ ದೈವಜ್ಞ ಕೊಆಪ್‍ರೇಟಿವ್ ಕ್ರೇಡಿಟ್ ಸೊಸೈಟಿ ಅಧ್ಯಕ್ಷ ಮಂಜುನಾಥ ವೆರ್ಣೇಕರ, ಪ್ರಶಾಂತ ಬಾಡಕರ ಮುಂತಾದವರಿದ್ದರು.
ವಾದಿರಾಜ ಗುರುಸಾರ್ವಭೌಮ ಕುರಿತು ಮುಂಡಗೋಡಿನ ರಾಮಚಾರಿ ಜೋಶಿ ಉಪನ್ಯಾಸ ನೀಡಿದರು.

ಸಭಾ ಕಾರ್ಯಕ್ರಮ ಪೂರ್ವದಲ್ಲಿ ಕಸಾಪ ಸದಸ್ಯರು ಕನ್ನಡ ಪೇಮಿಗಳು ಹಾಗೂ ದೈವಜ್ಞ ಕೊ ಆಪ್‍ರೇಟಿವ ಸೋಸೈಟಿಯ ಸದಸ್ಯರು ಮಾರಿಕಾಂಭಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಸಾಪ ಅಧ್ಯಕ್ಷರನ್ನು ಹಾಗೂ ದೈವಜ್ಞ ಕೊ.ಆಪ್‍ರೇಟಿವ್ ಸೊಸೈಟಿಯ ಅಧ್ಯಕ್ಷರನ್ನು ಸಾರೋಟದಲ್ಲಿ ಮೆರವಣಿಗೆ ಮುಖಾಂತರ ಸಭಾ ಕಾರ್ಯಕ್ರಮಕ್ಕೆ ಕರೆ ತರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News