ಅರ್ಹರಿಗೆ ಲಾಟರಿ ಮೂಲಕ 200 ನಿವೇಶನಗಳ ಹಂಚಿಕೆ: ಸೈಯದ್ ಹನೀಫ್

Update: 2018-02-27 12:05 GMT

ಚಿಕ್ಕಮಗಳೂರು, ಫೆ.27: ಎ.ಬಿ.ವಾಜಪೇಯಿ ವಸತಿ ಬಡಾವಣೆ ಯೋಜನೆಯಡಿ ಸುಮಾರು 200ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಲಾಟರಿ ಮೂಲಕ ನಿವೇಶನಗಳನ್ನು ಹಂಚಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಹನೀಫ್ ತಿಳಿಸಿದ್ದಾರೆ. 

ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಎ.ಬಿ.ವಾಜಪೇಯಿ ವಸತಿ ಬಡಾವಣೆ ನಿವೇಶನಗಳ ವಿತರಣೆ ಸಂಬಂಧ ಲಾಟರಿ ಎತ್ತುವ ಮೂಲಕ ಫಲಾನುಭವಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 195 ಎಕರೆ ಜಾಗದಲ್ಲಿ 2,591 ನಿವೇಶನಗಳಿದ್ದು, ಇದರಲ್ಲಿ 40x60, 30x50, 30x40 ಹಾಗೂ 20x30 ಅಳತೆಯ ನಿವೇಶನಗಳನ್ನು 868 ರೈತರಿಗೆ ಹಂಚಲಾಗಿದೆ. ಈಗ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಚದರ ಅಡಿಗೆ 650 ರೂ. ನಿಗಧಿ ಪಡಿಸಿ ಲಾಟರಿಯ ಮೂಲಕ ನಿವೇಶನಗಳನ್ನು ಹಂಚಲಾಗಿದೆ ಎಂದ ಅವರು, ಉಳಿದಿರುವ ಮೂಲೆ ನಿವೇಶನಗಳನ್ನು ಹಾಗೂ ವಾಣಿಜ್ಯ ನಿವೇಶನಗಳನ್ನು ಆದಷ್ಟು ಬೇಗ ಬಹಿರಂಗವಾಗಿ ಹರಾಜು ಹಾಕಲಾಗುವುದು. ಒಂದು ವರ್ಷದೊಳಗಾಗಿ ಈ ವಾಜಪೇಯಿ ವಸತಿ ಬಡಾವಣೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಟಿ.ಆರ್.ಭೀಮನೀಡಿ, ನಗರ ಯೋಜನೆಯ ಸದಸ್ಯರಾದ ಆರ್.ಚಂದ್ರು, ತೆರೇಸಾ ಲೋಬೊ, ನಗರಾಭಿವೃದ್ಧಿ ಪ್ರಾಧಿಕಾರದ ಉಪ ಇಂಜಿನಿಯರ್ ಎನ್.ಶಶಿಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News