ಮರ್ಕಝ್ ಕೆ.ಎಸ್.ಒ ಆರ್ಟ್ಸ್ ಫೆಸ್ಟ್ ಘೋಷಣೆ

Update: 2018-02-28 18:55 GMT

ಕೋಝಿಕ್ಕೋಡ್,ಫೆ.28: ಮರ್ಕಝ್ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಾದ ಕೆ.ಎಸ್.ಓ ಇದರ ಆರ್ಟ್ಸ್ ಫೆಸ್ಟ್ ಇಝ್ದಿಹಾರ್ -18 ಅನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ತಾದ್ ವಿ.ಪಿ.ಎಂ ಫೈಝಿ ವಿಲ್ಯಾಪಳ್ಳಿ ಮರ್ಕಝ್ ಮಸ್ಜಿದ್ ಹಾಮಿಲಿಯಲ್ಲಿ ಘೋಷಿಸಿದರು. ಈ ವೇಳೆ ಮರ್ಕಝ್ ಸೀನಿಯರ್ ಮುದರ್ರಿಸ್ ಉಸ್ತಾದ್ ಪಿ.ಸಿ ಅಬ್ದುಲ್ಲ ಫೈಝಿ ಪ್ರಾರ್ಥನೆ ನೆರೆವೇರಿಸಿದರು.

ಮರ್ಕಝ್ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಸಯ್ಯದ್ ಮುಝಮ್ಮಿಲ್ ತಂಙಳ್, ಪ್ರ.ಕಾರ್ಯದರ್ಶಿ ಪಿ.ಟಿ ಮುಹಮ್ಮದ್ ರಂಡತ್ತಾಣಿ, ಕೆ.ಎಸ್.ಒ ಅಧ್ಯಕ್ಷರಾದ ಹಾಫಿಝ್ ಸಿರಾಜ್ ಕರಾಯ ಉಪಸ್ಥಿತರಿದ್ದರು. ಪ್ರ. ಕಾರ್ಯದರ್ಶಿ ಹಸನ್ ತೀರ್ಥಹಳ್ಳಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News