ಜನರನ್ನು ಯುದ್ದಕ್ಕೆ ಸಿದ್ದಗೊಳಿಸುತ್ತಿರುವ ಮಾಧ್ಯಮಗಳು: ಕೋಟಗಾನಹಳ್ಳಿ ರಾಮಯ್ಯ

Update: 2018-03-03 18:00 GMT

ತುಮಕೂರು,ಮಾ.03: ಮಾಧ್ಯಮಗಳು ಮನುಷ್ಯ ಮನುಷ್ಯನ ನಡುವೆ ವಿಷಬೀಜ ಬಿತ್ತಿ ಮೂರನೇ ಮಹಾಯುದ್ದಕ್ಕೆ ಇಡೀ ವಿಶ್ವವನ್ನೆ ಸನ್ನದ್ದುಗೊಳಿಸುತ್ತಿದ್ದಾರೆ ಎಂದು ಹಿರಿಯ ರಂಗಕರ್ಮಿ ಕೋಟಗಾನಹಳ್ಳಿ ರಾಮಯ್ಯ ತಿಳಿಸಿದ್ದಾರೆ.

ಡಮರುಗ ರಂಗ ಸಂಪನ್ಮೂಲ ಕೇಂದ್ರ ಆಯೋಜಿಸಿದ ರಾಷ್ಟ್ರೀಯ ನಾಟಕೋತ್ಸವದ ಎರಡನೇ ದಿನದ ಮುಖ್ಯಅಥಿತಿಗಳಾಗಿ ಭಾಗವಹಿಸಿ ಮಾತನಾಡುತಿದ್ದ ಅವರು,ಮಾಧ್ಯಮಗಳು ಬಳಕೆ ಮಾಡುತ್ತಿರುವ ಭಾಷೆಗಳು ಇಡೀ ಮನುಕುಲವನ್ನೇ ಯುದ್ದದ ಕಡೆಗೆ ದೂಡುವಂತಿದೆ ಎಂದರು.

ಸಂಸ್ಕೃತಿಯು ವ್ಯಾಪಾರಿಕರಣ ಗೊಂಡಿದೆ. ಸರಕಾರಗಳು ಕೂಡ ಕಾರ್ಪೊರೇಟ್ ಕಂಪನಿಗಳ ಕೈಗೊಂಬೆಯಾಗಿವೆ. ಮಾನವೀಯತೆಯನ್ನು ಬಿತ್ತುವ ಸಂಸ್ಕರತಿಯನ್ನು ಬೆಳೆಸುವ ಇಂತಹ ರಂಗಕಾರ್ಯಕ್ಕೆ ಸರಕಾರದ ನೆರವು ತೀರ ಅಗತ್ಯ. ಆದರೆ ಸರಕಾರ ಇಂತಹವುಗಳನ್ನು ನಿರ್ಲಕ್ಷಿಸಿ ಎನ್.ಎಸ್.ಡಿಯಂತಹ ಬಿಳಿ ಆನೆಗಳನ್ನು ಮಾತ್ರ ಸಾಕುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರಾಷ್ಟ್ರಪ್ರಶಸ್ತಿ ವಿಜೇತ ಡಿ.ಟಿ.ವೆಂಕಟೇಶ್ ಮಾತನಾಡಿ, ಇಂತಹ ಸಣ್ಣಹಳ್ಳಿಯಲ್ಲಿ ರಂಗತರಭೇತಿಗೆ ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ರಂಗತಂಡದ ನಾಟಕೋತ್ಸವದ ಆಶಯ ಸಾಕಾರಗೊಳ್ಳಲಿ ಎಂದು ಹರಸಿದರು.

ಸಮಾರಂಭದಲ್ಲಿ ದಿಲೀಪ್‍ಕುಮಾರ್  ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ನಂತರ ಕೇರಳದ ಮಲ್ಲುಗಲ್ರ್ಸ್ ತಂಡವು ಲೀನು ನಿರ್ದೇಶನದಲ್ಲಿ "ಪೈಥೋಜ್‍ಹಿಯಾಥೆ" ಮಲೆಯಾಳಿ ನಾಟಕವನ್ನು ಅಭಿನಯಿಸಿದರು. "ಹೆಣ್ಣಿಗೆ ಮನೆ, ಶಾಲೆ, ಕಛೇರಿ ಎಲ್ಲವು ಜೈಲಿದ್ದಂತೆ. ಹೆಣ್ಣಿಗೆ ಬೇರೆ ಬೇರೆ ಆಯ್ಕೆಗಳಿಲ್ಲದೆ ಆತ್ಮಹತ್ಯೆಯೊಂದನೆ ಪುರುಷ ಸಮಾಜ ಮೀಸಲಿಟ್ಟಿದೆ. ಮಮತೆಯ ರೂಪವಾಗಿರುವ ಹೆಣ್ಣು ಮಾರಿಯಾಗುವ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ ಇಡೀ ಮನುಷ್ಯಕುಲಕ್ಕೆ ದುರಂತಕಾದಿದೆ ಎಂಬ ಸಂದೇಶವನ್ನು ನಾಟಕ ತೆರೆದಿಟ್ಟಿತು.ರಂಗದಲ್ಲಿ ಅಖಿಲಾ ಬಾಲನ್, ಅಪರ್ಣ,ಸೋನಿಯಾ ಎಸ್.,ಶ್ರೀಶ್ನ,ರೇಷ್ಮ,ಶ್ವೇತತಂಬಿ, ಅಮಲು ಮತುಕುಟ್ಟಿ, ಅಂಜುಬಿಜು, ರಾಕಿ, ಜೈತ ಉತಮನ್ ಅಭಿನಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News