ಅಮೆರಿಕದ ಸಂವಿಧಾನ ಅಧಿಕೃತವಾಗಿ ಜಾರಿಗೆ
* 1789: ಅಮೆರಿಕದ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದಿತು. ಅಮೆರಿಕ ಕಾಂಗ್ರೆಸ್‌ನ 9 ಸೆನೆಟರ್‌ಗಳು ಹಾಗೂ 13 ಪ್ರತಿನಿಧಿಗಳು ಸಭೆ ಸೇರಿ ಈ ಕುರಿತು ಘೋಷಣೆ ಹೊರಡಿಸಿದರು.
* 1899: ಕ್ವೀನ್ಸ್‌ಲ್ಯಾಂಡ್‌ನ ದಕ್ಷಿಣ ಕುಕ್‌ಟೌನ್‌ನಲ್ಲಿ ಮಹಿನಾ ಹೆಸರಿನ ಪ್ರಬಲ ಚಂಡಮಾರುತಕ್ಕೆ 300 ಜನ ಬಲಿಯಾದರು. * 1908: ಅಮೆರಿಕದ ಒಹಿಯೊದ ಕಾಲಿಂಗ್‌ವುಡ್ ಎಂಬಲ್ಲಿ ಶಾಲೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು 172 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಹಾಗೂ ರಕ್ಷಣಾ ಸೈನಿಕರು ಮೃತರಾದರು. ಅಮೆರಿಕದ ಮಾರಣಾಂತಿಕ ದುರಂತಗಳಲ್ಲಿ ಇದೂ ಒಂದು.
* 1918: ವಿಶ್ವದಲ್ಲಿ ಪ್ರಥಮ ಬಾರಿಗೆ ಸ್ಪಾನಿಶ್ ಫ್ಲೂ ರೋಗ ಪ್ರಕರಣ ಅಮೆರಿಕದ ಕನಾಸ್ ಪ್ರಾಂತದ ಫನ್‌ಸ್ಟನ್ ಆರ್ಮಿ ಕ್ಯಾಂಪ್‌ನಲ್ಲಿ ದಾಖಲಾಯಿತು.
* 1923: ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಪತ್ರಿಕೆ ‘ಪ್ರಾವ್ದಾ’ಗೆ ಕ್ರಾಂತಿಕಾರಿ ಲೆನಿನ್ ತಮ್ಮ ಕೊನೆಯ ಅಂಕಣ ಬರೆದರು.
* 1977: ರೋಮಾನಿಯಾದ ಬುಚಾರೆಸ್ಟ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸುಮಾರು 1,541 ಜನ ಬಲಿಯಾದ ವರದಿಯಾಯಿತು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.3ರಷ್ಟು ದಾಖಲಾಗಿತ್ತು.
* 2005: ಎಚ್‌ಐವಿ ಹರಡದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ 90 ಮಿಲಿಯನ್ ಜನರು ರೋಗಕ್ಕೆ ತುತ್ತಾಗುವರೆಂದು ವಿಶ್ವಸಂಸ್ಥೆಯು ಆಫ್ರಿಕಾಗೆ ಎಚ್ಚರಿಕೆ ನೀಡಿತು.
* 2013: ಪಂಜಾಬ್‌ನ ಜಲಂಧರ್‌ನಲ್ಲಿ ಬಸ್ಸೊಂದು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ 11 ಮಕ್ಕಳು ಸಾವಿಗೀಡಾದರು.
* 1925: ಸುಪ್ರಸಿದ್ಧ ಬಂಗಾಳಿ ಸಾಹಿತಿ ಜ್ಯೋತಿಂದ್ರನಾಥ ಟಾಗೋರ್ ನಿಧನ.
* 2011: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ನ ಪ್ರಭಾವಿ ನಾಯಕ ಅರ್ಜುನ್‌ಸಿಂಗ್ ನಿಧನ.