ತೆಲಂಗಾಣದ ಸಿಎಂ ಭದ್ರತೆಗೆ ಏಳು ಕೋಟಿ ರೂ. ಬೆಲೆಯ ಬುಲೆಟ್ ಪ್ರೂಫ್ ಬಸ್

Update: 2018-03-06 04:53 GMT

ಹೈದರಾಬಾದ್, ಮಾ.6: ನಕ್ಸಲರಿಂದ ಜೀವ ಬೆದರಿಕೆಯ ಕಾರಣದಿಂದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅವರ ಭದ್ರತೆಗಾಗಿ ಬುಲೆಟ್‌ಪ್ರೂಫ್ ಇರುವ 7 ಕೋ.ರೂ.ಬೆಲೆಯ ಬಸ್‌ನ್ನು ಖರೀದಿಸಲು ತೆಲಂಗಾಣದ ಗೃಹ ಇಲಾಖೆ ನಿರ್ಧರಿಸಿದೆ.

ಕಳೆದ ವಾರ ತೆಲಂಗಾಣ-ಛತ್ತೀಸ್‌ಗಢ ಗಡಿಭಾಗದಲ್ಲಿ ಎನ್‌ಕೌಂಟರ್‌ನಲ್ಲಿ 10 ನಕ್ಸಲರನ್ನು ಹತ್ಯೆಗೈಯಲಾಗಿತ್ತು. ಆನಂತರ ಮಾವೋವಾದಿಗಳು ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಮುಖಂಡರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ದುಬಾರಿ ಬೆಲೆಯ ಬಸ್‌ನ್ನು ಸಿಎಂ ರಾವ್ ಅವರು ರಾಜ್ಯ ಪ್ರವಾಸದ ವೇಳೆ ಬಳಸುತ್ತಾರೆ. ಸಿಎಂ ರಾವ್ ಮೂರು ವರ್ಷಗಳ ಹಿಂದೆ 4 ಕೋ.ರೂ. ಬೆಲೆಯ ಬುಲೆಟ್‌ಪ್ರೂಫ್ ಇರುವ ಮರ್ಸಿಡೆಸ್ ಬೆಂಝ್‌ನ್ನು ಖರೀದಿಸಿದ್ದರು. ಇದೀಗ ಮತ್ತೊಂದು ಬುಲೆಟ್ ಪ್ರೂಫ್ ಇರುವ ಬಸ್‌ನ್ನು ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News