ಐಸಿಐಸಿಐ ಬ್ಯಾಂಕ್ ನ ಚಂದಾ ಕೊಚ್ಚರ್, ಆಕ್ಸಿಸ್ ಬ್ಯಾಂಕ್‌ ನ ಶಿಖಾ ಶರ್ಮಗೆ ಸಮನ್ಸ್

Update: 2018-03-06 10:40 GMT

ಹೊಸದಿಲ್ಲಿ, ಮಾ.6: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ(ಪಿಎನ್‌ಬಿ) ಬಹು ಕೋಟಿ ರೂ. ವಂಚನೆ ಮಾಡಿರುವ ಮೆಹುಲ್ ಚೋಕ್ಸಿಯ ಗೀತಾಂಜಲಿ ಗ್ರೂಪ್‌ಗೆ ಸಾಲ ನೀಡಿರುವುದಕ್ಕೆ ಸಂಬಂಧಿಸಿ ಗಂಭೀರ ವಂಚನೆ ತನಿಖಾ ಕಚೇರಿ(ಎಸ್‌ಎಫ್‌ಐಒ)ಮಂಗಳವಾರ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚರ್ ಹಾಗೂ ಹಾಗೂ ಆಕ್ಸಿಸ್ ಬ್ಯಾಂಕಿನ ಆಡಳಿತ ನಿರ್ದೇಶಕಿ ಶಿಖಾ ಶರ್ಮಗೆ ಸಮನ್ಸ್ ಜಾರಿ ಮಾಡಿದೆ.

ಗೀತಾಂಜಲಿ ಸಮೂಹಕ್ಕೆ ಸಾಲ ನೀಡಿರುವ 31 ಬ್ಯಾಂಕ್‌ಗಳ ಪೈಕಿ ಐಸಿಐಸಿಐ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಕೂಡ ಸೇರಿದೆ. ಕೊಚ್ಚರ್ ಹಾಗೂ ಶರ್ಮ ಮಧ್ಯಾಹ್ನ ತನಿಖಾ ತಂಡದ ಮುಂದೆ ಹಾಜರಾಗಿದ್ದಾರೆ.

ಪಿಎನ್‌ಬಿ ಬ್ಯಾಂಕ್‌ಗೆ 12,700 ಕೋ.ರೂ.ಗೆ ಅಧಿಕ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಚೋಕ್ಸಿಯೊಂದಿಗೆ ಸಂಬಂಧ ಹೊಂದಿರುವ ಕನಿಷ್ಠ ್ಟ73 ಕಂಪೆನಿಗಳ ಮೇಲೆ ಸಿಬಿಐ, ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಎಸ್‌ಎಫ್‌ಐಒ ಹದ್ದಿನ ಕಣ್ಣಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News