ವಿದೇಶಿ ಜೈಲುಗಳಲ್ಲಿರುವ ಭಾರತೀಯರೆಷ್ಟು ಗೊತ್ತಾ ?

Update: 2018-03-07 17:17 GMT

ಹೊಸದಿಲ್ಲಿ, ಮಾ. 7: ವಿದೇಶಗಳ ಕಾರಾಗೃಹದಲ್ಲಿ ಒಟ್ಟು 7,850 ಭಾರತೀಯ ಕೈದಿಗಳು ಇದ್ದು, ಇದರಲ್ಲಿ ಅತ್ಯಧಿಕ ಸಂಖ್ಯೆಯ ಭಾರತೀಯ ಕೈದಿಗಳು ಸೌದಿ ಅರೇಬಿಯಾದ ಕಾರಾಗೃಹದಲ್ಲಿ ಇದ್ದಾರೆ. ಅಲ್ಲಿರುವ ಒಟ್ಟು ಭಾರತೀಯ ಕೈದಿಗಳ ಸಂಖ್ಯೆ 2,000 ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ವಿ.ಕೆ. ಸಿಂಗ್ ಹೇಳಿದ್ದಾರೆ. ಸೌದಿ ಅರೇಬಿಯಾದ ಜೈಲಿನಲ್ಲಿ ಅತ್ಯಧಿಕ ಅಂದರೆ 2,181 ಭಾರತೀಯ ಕೈದಿಗಳು ಇದ್ದಾರೆ. ಅನಂತರ ಅತಿ ಹೆಚ್ಚು ಭಾರತೀಯ ಕೈದಿಗಳು ಇರುವುದು ಯುಎಇಯಲ್ಲಿ. ಇಲ್ಲಿ 1628 ಕೈದಿಗಳು ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, ಹಲವು ದೇಶಗಳಲ್ಲಿ ಕಠಿಣ ಖಾಸಗಿ ಕಾನೂನು ಇರುವುದರಿಂದ ಸ್ಥಳೀಯ ಆಡಳಿತವು ಕೈದಿಗಳ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದರು.

ಸಚಿವಾಲಯಕ್ಕೆ ದೊರಕಿದ ಮಾಹಿತಿ ಪ್ರಕಾರ, ವಿದೇಶಿ ಕಾರಾಗೃಹಗಳಲ್ಲಿ ಇರುವ ಭಾರತೀಯ ಕೈದಿಗಳ ಸಂಖ್ಯೆ 7850 ಹಾಗೂ 28.02.2018ರ ವರೆಗೆ ಕಾರಾಗೃಹ ಅವಧಿ ಪೂರೈಸಿದ ಭಾರತೀಯ ಕೈದಿಗಳ ಸಂಖ್ಯೆ 360 ಎಂದು ಅವರು ಹೇಳಿದ್ದಾರೆ.

2003ರಲ್ಲಿ ಕಾರಾಗೃಹದಿಂದ ಪುನರಾಗಮನ ಕಾಯ್ದೆ ರೂಪಿಸಿದ ಬಳಿಕ ಪುನಾರಾಗಮನಕ್ಕಾಗಿ 170 ಕೈದಿಗಳು ಅರ್ಜಿ ಸಲ್ಲಿಸಿದ್ದಾರೆ. 63 ಭಾರತೀಯರು ವಿದೇಶಿ ಕಾರಾಗೃಹಗಳಿಂದ ಭಾರತಕ್ಕೆ ಹಿಂದಿರುಗಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News