ಹನೂರು: ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ

Update: 2018-03-08 12:00 GMT

ಹನೂರು,ಮಾ.8:  ಪಟ್ಟಣದಲ್ಲಿ ಕಳೆದ ನಾಲ್ಕು ದಿನಗಳಿಂದ ನೆಡೆಯುತ್ತಿರುವ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರ ಮಹೋತ್ಸವದ ಕೊನೆಯ ದಿನ ಅಗ್ನಿಕುಂಡ ದರ್ಶನ ಕಾರ್ಯಕ್ರಮದಲ್ಲಿ, ರಾತ್ರಿಯಿಡೀ ದೇವಿಗೆ ವಿಧಿ ವಿಧಾನಗಳ ಮೂಲಕ ವಿಶೇಷ ಪೂಜೆಯನ್ನು ಸಲ್ಲಿಸಿ ಮುಂಜಾನೆಯ ಪ್ರಾತಃಕಾಲದಲ್ಲಿ ದೇವಾಲಯದ ಪ್ರಧಾನ ಆರ್ಚಕರಾದ ಅರ್ಚಕ ರಾಜೋಜಿರಾವ್ ಸಿಂಧ್ಯಾ ಅಗ್ನಿಕುಂಡವನ್ನು ಎತ್ತುವುದರ ಮೂಲಕ ಈ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.

ಕಳೆದ 15 ದಿನ ಮುಂಚಿತವಾಗಿಯೇ ತಮಟೆ ಸಾರುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ದೇವಸ್ಥಾನದ ಅರ್ಚಕರಿಗೆ ವಿಧಿ ವಿಧಾನಗಳ ಮೂಲಕ ಕಂಕಣ ಕಟ್ಟಿದ್ದು, ದೇವಸ್ಥಾನದ ಮುಂಭಾಗ ಮೂರು ಕವಡಿನ ಒಂದು ಕಂಬವನ್ನು ಹಾಕಿ ಅದರ ಮೇಲೆ ಮಣ್ಣಿನ ಮಡಿಕೆಯಲ್ಲಿ ಪ್ರತಿ ದಿನ ರಾತ್ರಿ ಆಗ್ನಿಯನ್ನು ಸ್ಪರ್ಶಿಸಿ ನಿತ್ಯ ಪೂಜಾ ಕೈಕಂರ್ಯಗಳು ನಡೆಯಿತು. ಜಾತ್ರೆಯ ಕೊನೆಯ ದಿನವಾದ ಗುರುವಾರ ಪ್ರಾತಃಕಾಲ 5.50ಕ್ಕೆ ಅಗ್ನಿಕುಂಡಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ದೇವಾಲಯದ ಅರ್ಚಕ ರಾಜೋಜಿರಾವ್ ಸಿಂಧ್ಯಾ ಅಗ್ನಿಕುಂಡವನ್ನು ಎತ್ತಿ ಅನಂತರ ದೇವಸ್ಥಾನದ ಸುತ್ತ ಒಂದು ಸುತ್ತು ಪ್ರದರ್ಶಸಿಸುವಾಗ ತಾವು ಹರೆಕೆ ಹೊತ್ತಿದ್ದ ಕೋಳಿಮರಿಗಳನ್ನು ಎಸೆದು ತಮ್ಮ ಹರಕೆಯನ್ನು ತೀರಿಸಿಕೊಂಡರಲ್ಲದೇ ಜಯ ಘೋಷಣೆಗಳನ್ನು ಮೊಳಗಿಸಿದರು.

ಬಳಿಕ ಅಗ್ನಿಕುಂಡವನ್ನು ದೇವಸ್ಥಾನದ ಗುಡಿಯೊಳಗೆ ಕೊಂಡೊಯ್ದು, ತೊಡೆಯ ಮೇಲೆ ಇಟ್ಟು ಮುಂದಿನ ದಿನಗಳ ಮಳೆ ಬೆಳೆಗಳ ಬಗ್ಗೆ ಮುನ್ಸೂಚನೆಯನ್ನು ನೀಡಿ ಅನಂತರ ಈ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News