ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ಗೆ 5 ಕೋ.ರೂ. ದಂಡ ವಿಧಿಸಿದ ಆರ್ ಬಿಐ

Update: 2018-03-09 16:35 GMT

ಮುಂಬೈ, ಮಾ.9: ನಿರ್ವಹಣಾ ಮಾರ್ಗದರ್ಶಿ ಸೂತ್ರ ಹಾಗೂ ಕೆವೈಸಿ(ನಿಮ್ಮ ಗ್ರಾಹಕರನ್ನು ಅರಿಯಿರಿ) ಮಾನದಂಡವನ್ನು ಉಲ್ಲಂಘಿಸಿದ ಕಾರಣಕ್ಕೆ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ಗೆ 5 ಕೋಟಿ ರೂ. ದಂಡವನ್ನು ಆರ್‌ಬಿಐ ವಿಧಿಸಿದೆ.

  ಗ್ರಾಹಕರ ಸ್ಪಷ್ಟ ಒಪ್ಪಿಗೆ ಪಡೆಯದೆ ಬ್ಯಾಂಕ್ ಗ್ರಾಹಕರ ಹೆಸರಲ್ಲಿ ಖಾತೆಗಳನ್ನು ತೆರೆದಿದೆ ಎಂಬ ದೂರು ಹಾಗೂ ಮಾಧ್ಯಮದ ವರದಿಯ ಬಳಿಕ ಆರ್‌ಬಿಐ 2017ರ ನವೆಂಬರ್ 20ರಿಂದ 22ರವರೆಗೆ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ಸಂದರ್ಭ 23 ಲಕ್ಷಕ್ಕೂ ಹೆಚ್ಚು ಗ್ರಾಹಕರ ಹೆಸರಿನಲ್ಲಿ ಅವರ ಒಪ್ಪಿಗೆ ಪಡೆಯದೆ ತೆರೆಯಲಾದ ಏರ್‌ಟೆಲ್ ಬ್ಯಾಂಕ್ ಖಾತೆಯಲ್ಲಿ 47 ಕೋಟಿ ರೂ.ನಷ್ಟು ಮೊತ್ತ ಜಮೆಯಾಗಿರುವುದು ಬೆಳಕಿಗೆ ಬಂದಿತ್ತು.

 ಈ ಹಿನ್ನೆಲೆಯಲ್ಲಿ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ಗೆ ಜನವರಿ 15ರಂದು ಆರ್‌ಬಿಐ ಶೋಕಾಸ್ ನೋಟಿಸ್ ನೀಡಿತ್ತು. ಇದಕ್ಕೆ ಬ್ಯಾಂಕ್ ಸಲ್ಲಿಸಿದ ಉತ್ತರ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ ಇದೀಗ 5 ಕೋಟಿ ದಂಡ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News