ಉಡುಪಿಯಲ್ಲಿ ಮಾ.17 ರಿಂದ ದಶಮನೋತ್ಸವದ ಸರಣಿ ಕಾರ್ಯಕ್ರಮ

Update: 2018-03-12 18:25 GMT

ಬೆಂಗಳೂರು, ಮಾ.12: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ದಶಮಾನೋತ್ಸವದ ಅಂಗವಾಗಿ ‘ಹತ್ತರ ಹತ್ತು ಹೆಜ್ಜೆಗಳು’ ಎಂಬ ವೈವಿದ್ಯಮಯ ಸರಣಿ ಕಾರ್ಯಕ್ರಮವನ್ನು ಮಾ.17 ರಿಂದ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಪ್ರದೇಶಗಳಲ್ಲಿ ಹತ್ತು ವಿಶಿಷ್ಟ ಆಲೋಚನೆಗಳ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಾ.17 ರಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ‘ನಾಡೋಜ ಕೆ.ಪಿ.ರಾವ್ ಅವರೊಂದಿಗೆ ಸಂವಾದ’ ನಡೆಯಲಿದೆ ಎಂದು ತಿಳಿಸಿದರು.

ಮಾ.19 ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ‘ಪ್ರಥಮ ಅಂಗನವಾಡಿ ಮಕ್ಕಳ ಮೇಳ’, ಎ.3 ರಂದು ಕಾರ್ಕಳದ ಕ್ರೈಸ್ಟ್ ಕಿಂಗ್ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ‘ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಕಲರವ’ ಕಾರ್ಯಕ್ರಮ ಹಾಗೂ ಎ.7 ರಂದು ಹಿರಿಯಡ್ಕ ಸಮೀಪದ ಪಂಚನ ಬೆಟ್ಟುವಿನಲ್ಲಿ ‘ಪಂಚನಬೆಟ್ಟು ಉತ್ಸವ’ ಜೂ.4 ರಂದು ಎಣ್ಣೆಹೊಳೆ ರಾಧಾನಾಯಕ್ ಶಾಲೆಯಲ್ಲಿ ‘ಯುವಜನ ಸಾಹಿತ್ಯಾಸಕ್ತಿ- ಸಾಹಿತ್ಯಾಭಿರುಚಿ’ ಕಾರ್ಯಕ್ರಮ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಮುಂಬಯಿಯಲ್ಲೂ ಒಂದು ಕಾರ್ಯಕ್ರಮ ನಡೆಯಲಿದ್ದು, ವರ್ಷಾಂತ್ಯಕ್ಕೆ ಬೆಂಗಳೂರಿನಲ್ಲಿಯೂ ಒಂದು ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ವರ್ಷಾಂತ್ಯಕ್ಕೆ ಒಂದು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News