ಕೇರಳದಲ್ಲಿ ಕಾರ್ಯಕರ್ತರ ಸಂಖ್ಯೆಯಲ್ಲಿ ಹೆಚ್ಚಳ : ಆರೆಸ್ಸೆಸ್

Update: 2018-03-16 11:40 GMT

ಕಲ್ಲಿಕೋಟೆ,ಮಾ.16: ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಸಂಖ್ಯೆ ಹೆಚ್ಚಳಗೊಂಡಿದೆ ಎಂದು ಪ್ರಾಂತ ಕಾರ್ಯವಾಹ್  ಪಿ. ಗೊಪಾಲನ್ ಕುಟ್ಟಿ ತಿಳಿಸಿದ್ದಾರೆ. ಒಟ್ಟು 1,503 ಮಂಡಲಗಳಿದ್ದು, ಇದರಲ್ಲಿ  1426 ಮಂಡಲಗಳಲ್ಲಿ ಆರೆಸ್ಸೆಸ್ ಸಕ್ರಿಯ ಚಟುವಟಿಕೆ ನಡೆಸುತ್ತಿದೆ. 56 ಮಂಡಲಗಳಲ್ಲಿ ಹೊಸದಾಗಿ ಚಟುವಟಿಕೆಯನ್ನು ಆರೆಸ್ಸೆಸ್ ಆರಂಭಿಸಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇರಳದಲ್ಲಿ  4105 ಶಾಖೆಗಳು ಇವೆ. 58,962 ಶಾಖೆಗಳನ್ನು ಹೊಂದಿರುವ ಕೇರಳ-  ತಮಿಳ್ನಾಡು ಸಹಿತ ದಕ್ಷಿಣ ಕ್ಷೇತ್ರಕ್ಕೆ ಸಂಘಚಾಲಕರಾಗಿ ಡಾ. ಆರ್. ವನ್ನಿಯ ರಾಜರನ್ನು ಅಖಿಲ ಭಾರತೀಯ ಪ್ರತಿನಿಧಿ ಸಭಾ ಆಯ್ಕೆಮಾಡಿದೆ. ಭಯ್ಯಾಜಿ ಜೋಷಿ ಯಾನೆ  ಸುರೇಶ್ ಜೋಷಿ ಆರೆಸ್ಸೆಸ್ ಸಹಕಾರ್ಯವಾಹ್  ಆಗಿ ಮುಂದುವರಿಯಲಿದ್ದಾರೆ. ಡಾ. ಮೋಹನ್ ವೈದ್ಯ, ಸಿ.ಆರ್ ಮುಕುಂದ್ ರನ್ನು  ಸರ್‍ಕಾರ್ಯವಾಹಕ್ ಆಗಿ ಹೊಸದಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News