ಐನ್‌ಸ್ಟೀನ್ ಗಿಂತಲೂ ಉತ್ತಮ ಸಿದ್ಧಾಂತ ವೇದಗಳಲ್ಲಿದೆ ಎಂದು ಹಾಕಿಂಗ್ ಹೇಳಿದ್ದರು

Update: 2018-03-16 17:20 GMT

ಹೊಸದಿಲ್ಲಿ, ಮಾ.16: ಅಲ್ಬರ್ಟ್ ಐನ್‌ಸ್ಟೀನ್ ಅವರ ಸಾಪೇಕ್ಷ ಸಿದ್ಧಾಂತಕ್ಕಿಂತ ಉತ್ತಮವಾದ ಸಿದ್ಧಾಂತವನ್ನು ವೇದಗಳಲ್ಲಿ ತಿಳಿಸಲಾಗಿದೆ ಎಂದು ಈ ವಾರ ನಿಧನರಾದ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಒಂದೊಮ್ಮೆ ತಿಳಿಸಿದ್ದರು ಎಂದು ಕೇಂದ್ರ ವಿಜ್ಞಾನ ಸಚಿವ ಹರ್ಷವರ್ಧನ್ ಶುಕ್ರವಾರ ಹೇಳಿಕೆ ನೀಡಿದ್ದಾರೆ. 105ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವಿಜ್ಞಾನ ಸಚಿವರು ಈ ಹೇಳಿಕೆ ನೀಡಿದ್ದು ನಂತರ ಮಾಧ್ಯಮ ಪ್ರತಿನಿಧಿಗಳು ಅದರ ಮೂಲದ ಬಗ್ಗೆ ಪ್ರಶ್ನಿಸಿದಾಗ ಹಾರಿಕೆಯ ಉತ್ತರ ನೀಡಿ ತಪ್ಪಿಸಲು ಪ್ರಯತ್ನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಾವು ಈ ವಾರ ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ರನ್ನು ನಾವು ಕಳೆದುಕೊಂಡಿದ್ದೇವೆ. ಅವರು ಹಿಂದೊವ್ಮೆು ಐನ್‌ಸ್ಟೀನ್ ಪ್ರತಿಪಾದಿಸಿದ ಸಾಪೇಕ್ಷ ಸಿದ್ದಾಂತಕ್ಕಿಂತಲೂ ಮಿಗಿಲಾದ ಸಿದ್ಧಾಂತವನ್ನು ವೇದಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು ಎಂದು ಹರ್ಷವರ್ಧನ್ ತಿಳಿಸಿದ್ದಾರೆ. ಸಚಿವರ ಹೇಳಿಕೆಗೆ ಮಾಧ್ಯಮ ಪ್ರತಿನಿಧಿಗಳು ಮೂಲವನ್ನು ಕೇಳಿದಾಗ, “ಅದನ್ನು ನೀವೇ ಹುಡುಕಿ. ಈ ಬಗ್ಗೆ ಒಂದಷ್ಟು ನೀವು ಕೂಡಾ ಅಧ್ಯಯನ ನಡೆಸಿ ಎಂದು ಹೇಳುತ್ತಾ ತಪ್ಪಿಸಿಕೊಂಡಿದ್ದಾರೆ” ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದಾಗ ವೇದಗಳ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಜಾಲತಾಣದಲ್ಲಿ ಹಾಕಿಂಗ್ ಹೇಳಿಕೆ ದಾಖಲಾಗಿರುವುದು ಕಂಡುಬಂದಿದೆ. ಡಾ. ಶಿವರಾಮ್ ಬಾಬು ಬರೆದಿರುವ ವೇದ ವಿಜ್ಞಾನ ಪುಸ್ತಕಗಳನ್ನು ಉಲ್ಲೇಖಿಸಿ ಸ್ಟೀಫನ್ ಹಾಕಿಂಗ್ ಮೇಲಿನ ಹೇಳಿಕೆ ನೀಡಿದ್ದಾರೆ ಎಂದು ಜಾಲತಾಣದಲ್ಲಿ ಬರೆಯಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News