ವಿಮಾನ ನಿಲ್ದಾಣಗಳಲ್ಲಿ ವಸ್ತು ಕಳೆದುಕೊಂಡರೆ ದೂರು ನೀಡುವುದು ಇನ್ನು ಸುಲಭ

Update: 2018-03-17 16:34 GMT

ಹೊಸದಿಲ್ಲಿ, ಮಾ.17: ವಿಮಾನ ಪ್ರಯಾಣಿಕರು ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಕಳೆದುಕೊಂಡ ವಸ್ತುಗಳ ಬಗ್ಗೆ ದಾಖಲಿಸಿರುವ ದೂರಿನ ಸದ್ಯದ ಸ್ಥಿತಿಯನ್ನು ತಿಳಿಯಲು ಅನುಕೂಲವಾಗುವಂತೆ ಮೊಬೈಲ್ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಸಿಐಎಸ್‌ಎಫ್‌ನ ಇಪಿಡಿ ವಿಭಾಗವು ರಾಷ್ಟ್ರೀಯ ಇ-ಗವರ್ನೆನ್ಸ್ ವಿಭಾಗದ ಯುನಿಫೈಡ್ ಮೊಬೈಲ್ ಅಪ್ಲಿಕೇಶನ್ ಫೋರ್ ನ್ಯೂ ಏಜ್ ಗವರ್ನೆನ್ಸ್ (ಉಮಂಗ್)ನ ಸಹಯೋಗದಲ್ಲಿ ಲೋಸ್ಟ್ ಆ್ಯಂಡ್ ಫೌಂಡ್ ಎಂಬ ಮೊಬೈಲ್ ಆ್ಯಪನ್ನು ಅಭಿವೃದ್ಧಿಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ತಂತ್ರಾಂಶದ ಪ್ರಮುಖ ಲಾಭವೆಂದರೆ ಪ್ರಯಾಣಿಕರು ನೇರವಾಗಿ ತಮ್ಮ ದೂರುಗಳನ್ನು ದಾಖಲಿಸಬಹುದಾಗಿದೆ ಮತ್ತು ಕೂಡಲೇ ದೂರಿನ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಪ್ರಯಾಣಿಕರು ಈ ಆ್ಯಪ್ ಮೂಲಕ ತಾಂತ್ರಿಕ ಸಲಹೆಯನ್ನೂ ಪಡೆಯಬಹುದಾಗಿದೆ ಎಂದು ಸಿಐಎಸ್‌ಎಫ್‌ನ ಸಹಾಯಕ ಪ್ರಧಾನ ನಿರೀಕ್ಷಕ ಹೇಮೇಂದ್ರ ಸಿಂಗ್ ತಿಳಿಸಿದ್ದಾರೆ. 2015ರಲ್ಲಿ ಸಿಐಎಸ್‌ಎಫ್ ಲೋಸ್ಟ್ ಆ್ಯಂಡ್ ಫೌಂಡ್ ವೆಬ್ ಅಪ್ಲಿಕೇಶನನ್ನು ಅಭಿವೃದ್ಧಿಪಡಿಸಿದ್ದರೂ ಅದರಲ್ಲಿ ಪ್ರಯಾಣಿಕರು ನೇರವಾಗಿ ದೂರುಗಳನ್ನು ದಾಖಲಿಸುವ ಸೌಲಭ್ಯವಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News