ಚೆಟ್ಟಳ್ಳಿ ಬಿಸಿಎಂ ಹಾಸ್ಟೇಲಿಗೆ ಸೀಸಿಟಿವಿ ಅಳವಡಿಕೆ

Update: 2018-03-19 10:39 GMT

ಚೆಟ್ಟಳ್ಳಿ,ಮಾ.19: ಚೆಟ್ಟಳ್ಳಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅನಾಮದೇಯ ವ್ಯಕ್ತಿಗಳು ರಾತ್ರಿಯಲ್ಲಿ ಕಿಟಕಿ ಬಾಗಿಲನ್ನು ತಟ್ಟುವುದು, ಕಲ್ಲನ್ನು ಬಿಸಾಡಿ ಕುಚೇಷ್ಠೆ ಮಾಡುವ ಮೂಲಕ ಮೇಲ್ವಿಚಾರಕರಿಗೆ ಹಾಗು ಸಿಬ್ಬಂದಿಗಳಿಗೆ ತಲೆನೋವಾಗುತಿರುವ ಬಗ್ಗೆ ವರದಿಯೊಂದನ್ನು ಪ್ರಕಟಿಸಿದ ಹಿನ್ನೆಲೆ ಹಿಂದುಳಿದ ವರ್ಗ ವಸತಿ ನಿಲಯಗಳ ಕೊಡಗು ಜಿಲ್ಲಾ ಮೇಲ್ವಿಚರಣಾ ಅಧಿಕಾರಿಗಳಾದ ಕೆ.ವಿ. ಸುರೇಶ್ ರವರು ಶೀಘ್ರದಲ್ಲೇ ಸ್ಪಂದಿಸಿ ವಸತಿ ನಿಲಯಗಳ ಸುತ್ತಲು ಎಂಟು ಸಿಸಿ ಕ್ಯಾಮರಾಗಳನ್ನು ಅಳವಡಿಸಿರುವುದಲ್ಲೆ ವಿದ್ಯುತ್ ದೀಪಗಳನ್ನು ಅಳವಡಿಸಲು ಸೂಚಿಸಿದ್ದಾರೆ.

ಮಾರ್ಚ್19ರ ಸೋಮವಾರ ಡಿಓ ಸುರೇಶ್ ರವರು ಚೆಟ್ಟಳ್ಳಿ ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿ ಸೀಸಿಟಿವಿ, ಮೇಲ್ವಿಚಾರಣೆಯ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭ ಜಿಲ್ಲಾ ಕಾಂಗ್ರೇಸ್ ವಕ್ತಾರ ಹಾಗು ಪತ್ರಕರ್ತ ಪುತ್ತರಿರ ಪಪ್ಪುತಿಮ್ಮಯ್ಯ, ಚೆಟ್ಟಳ್ಳಿ ಪ್ರೌಢಶಾಲಾ ಶಿಕ್ಷಕರಾದ ಪಿ.ಎಸ್ ಮಾಚಯ್ಯ, ಸಿ.ಪ್ರಸನ್ನ, ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ, ವಸತಿವಲಯದ ಮೇಲ್ವಿಚಾರಕರಾದ ಚಂದ್ರ ಹಾಜರಿದ್ದರು. ಡಿಓ ಸುರೇಶ್‍ರವರು ಚೆಟ್ಟಳ್ಳಿ ಪ್ರೌಢಶಾಲೆಗೆ ಬೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News