ಅಧಿಕಾರಿ ನಿತ್ಯಾವತಿ ವರ್ಗಾವಣೆಗೆ ಆಗ್ರಹಿಸಿ ನ್ಯೂ ಮಿನರ್ವ ಮಿಲ್ ಕಂಪನಿ ಮುಂದೆ ಕಾರ್ಮಿಕರ ಮುಷ್ಕರ

Update: 2018-03-20 12:08 GMT

ಹಾಸನ, ಮಾ. 20: ಕಾರ್ಮಿಕ ನೀತಿಯನ್ನು ಅನುಸರಿಸುತ್ತಿರುವ ಕಂಪನಿ ಅಧಿಕಾರಿ ನಿತ್ಯಾವತಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ನ್ಯೂ ಮಿನರ್ವ ಮಿಲ್ ಕಂಪನಿ ಕಾರ್ಮಿಕರು ತಮ್ಮ ಅನಿರ್ಧಿಷ್ಟವಧಿ ಮುಷ್ಕರ ಪ್ರಾರಂಭಿಸಿದ್ದಾರೆ.

ನಗರದ ಹೊರ ವಲಯದ ಹನುಮಂತಪುರ ಬಳಿ ಇರುವ ನ್ಯೂ ಮಿನರ್ವ ಮಿಲ್ ಕಂಪನಿ ಮುಂದೆ ಮಂಗಳವಾರದಿಂದ ಪ್ರಾರಂಭಿಸಿರುವ ಮುಷ್ಕರಕ್ಕೆ ಸ್ಪಂದಿಸಿ ಕಂಪನಿಯ ಅಧಿಕಾರಿ ನಿತ್ಯಾವತಿ ಅವರನ್ನು ತಕ್ಷಣದಲ್ಲಿ ವರ್ಗಾವಣೆ ಮಾಡದಿದ್ದರೇ ನಮ್ಮ ಮುಷ್ಕರವನ್ನು ಅನಿರ್ಧಿಷ್ಟವಧಿಯಾಗಿ ಮುಂದುವರೆಸುವ ಎಚ್ಚರಿಕೆ ನೀಡಿದರು. ಇವರ ವರ್ಗಾವಣೆ ವಿಚಾರವಾಗಿ ಕಳೆದ ತಿಂಗಳಲ್ಲೆ ಲಿಖಿತವಾಗಿ ಕಾರ್ಮಿಕರು ಆಡಳಿತದ ಗಮನಕ್ಕೆ ತರಲಾಗಿದ್ದರೂ ಇದುವರೆಗೂ ಗಮನ ನೀಡಿರುವುದಿಲ್ಲ. ಕಳೆದ 5 ದಿನಗಳ ಹಿಂದೆ ವರ್ಗಾವಣೆ ಮಾಡಿರುವುದಾಗಿ ಹೇಳಿದ್ದರಿಂದ ನಮ್ಮ ಮುಷ್ಕರವನ್ನು ವಾಪಸ್ ಪಡೆದಿದ್ದೆವು. ಈಗ ಮತ್ತೆ ಮೂರು ತಿಂಗಳಗಳ ಕಾಲ ಇಲ್ಲೆ ಇರುವ ಬಗ್ಗೆ ಮಾಹಿತಿಗಳು ಬಂದ ಹಿನ್ನಲೆಯಲ್ಲಿ ನಮ್ಮ ಮುಷ್ಕರವನ್ನು ಮುಂದುವರೆಸುತ್ತಿರುವುದಾಗಿ ಹೇಳಿದರು.

ನ್ಯೂ ಮಿನರ್ವ ಮಿಲ್ ಕಂಪನಿ ಮುಂದೆ ನೂರು ಅಡಿ ದೂರು ಕಾರ್ಮಿಕರು ಯಾವ ಪ್ರತಿಭಟನೆ ಮಾಡುವಾಗಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರಿಂದ ಕಾರ್ಮಿಕರು ಕಂಪನಿಯಿಂದ ನೂರು ಅಡಿ ದೂರದಲ್ಲಿ ಕಾಡು ಒಳಗೆ ಕೂರಬೇಕಾಯಿತು. ಸ್ಥಳದಲ್ಲೆ ಕಾರ್ಮಿಕರಿಗೆ ಅಡುಗೆ ತಯಾರಿಸಲಾಯಿತು.
ಮುಷ್ಕರದಲ್ಲಿ ಕಾರ್ಮಿಕರಾದ ಎಸ್.ಎಂ. ಮಧು, ಮಂಜುನಾಥ್, ಭಾನುಪ್ರಕಾಶ್, ಲೋಕೇಶ್ ಸರೋಜ, ಮಂಜೂಳಾ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News