7 ರೂಪಾಯಿಗೆ ಕಂಪ್ಯೂಟರ್ !
ತನ್ನ ವಾರ್ಷಿಕ ಸಮ್ಮೇಳನದ ಮೊದಲ ದಿನದಂದು ಐಬಿಎಂ ವಿಶ್ವದ ಅತ್ಯಂತ ಚಿಕ್ಕ ಕಂಪ್ಯೂಟರ್ ಅನ್ನು ಅನಾವರಣಗೊಳಿಸಿದೆ. ಈ ಅತ್ಯಂತ ಚಿಕ್ಕದಾದ ಕಂಪ್ಯೂಟರ್ ನಾವೆಣಿಸಿದ್ದಕ್ಕಿಂತಲೂ ಚಿಕ್ಕದಿದೆ.
ಈ ಮಿನಿ ಕಂಪ್ಯೂಟರಿನ ಕಂಪ್ಯೂಟಿಂಗ್ ಶಕ್ತಿ 1990ರ ಎಕ್ಸ್86 ಚಿಪ್ ಗೆ ಸಮನಾಗಿದ್ದು ಇದು ಸದ್ಯ ಇರುವ ಅತ್ಯಂತ ಹೆಚ್ಚು ಸಾಮರ್ಥ್ಯದ ಚಿಪ್ ಎಂದು ಹೇಳಲಾಗದು.
ಈ ವಿಶ್ವದ ಅತ್ಯಂತ ಚಿಕ್ಕ ಕಂಪ್ಯೂಟರ್ ನಲ್ಲಿ ಮಿಲಿಯಗಟ್ಟಲೆ ಟ್ರಾನ್ಸಿಸ್ಟರುಗಳಿದ್ದು ಕಂಪೆನಿಯ ಕ್ರಿಪ್ಟೊ ಆ್ಯಂಕರ್ ಕಾರ್ಯಕ್ರಮದ ಫಲ ಇದಾಗಿದೆ. ಈ ಕ್ರಿಪ್ಟೋ ಆ್ಯಂಕರುಗಳು ಸುರಕ್ಷಿತ ಡಿಜಿಟಲ್ ವಾಟರ್ ಮಾರ್ಕ್ ಆಗಿ ಕಾರ್ಯಾಚರಿಸುವುದಲ್ಲದೆ ನಕಲಿ ಉತ್ಪನ್ನಗಳನ್ನು ದೂರವಾಗಿಸುವ ಸಾಮರ್ಥ್ಯ ಹೊಂದಿದೆ.
ಈ ಮಿನಿ ಕಂಪ್ಯೂಟರುಗಳನ್ನು ಅತ್ಯಂತ ಕಡಿಮೆ ಅಂದರೆ 10 ಸೆಂಟ್, ಅಂದಾಜು ರೂ. 7ರೂ. ಗೆ ದೊರೆಯುವಂತೆ ಮಾಡುವ ಉದ್ದೇಶ ಐಬಿಎಂಗಿದೆ.
ಮುಂದಿನ ಐದು ವರ್ಷಗಳಲ್ಲಿ ಕ್ರಿಪ್ಟೋಗ್ರಾಫಿಕ್ ಆ್ಯಂಕರುಗಳು ಒಂದು ಸಣ್ಣ ಕಾಳಿನ ಗಾತ್ರದಲ್ಲಿ ಪ್ರತಿಯೊಂದು ಸಾಧನದಲ್ಲಿರಬಹುದು ಎಂದು ಐಬಿಎಂ ಸಂಶೋಧನಾ ವಿಭಾಗದ ಮುಖ್ಯಸ್ಥ ಅರವಿಂದ್ ಕೃಷ್ಣನ್ ಹೇಳುತ್ತಾರೆ. ಸದ್ಯದಲ್ಲಿಯೇ ಮಿನಿ ಕಂಪ್ಯೂಟರುಗಳು ದೊಡ್ಡ ಸಂಖ್ಯೆಯಲ್ಲಿ ಉತ್ಪಾದನೆಯಾಗುವ ಸಾಧ್ಯತೆಯೂ ಇದೆ.