ಹನೂರು: ಪ್ರಿತನ್‍ ನಾಗಪ್ಪರವರ ರಾಜಕೀಯ ಭವಿಷ್ಯವನ್ನು ಚಿವುಟಲು ಮಂದಾಗಬೇಡಿ; ಆನಾಪುರ ಉಮೇಶ್ ಮನವಿ

Update: 2018-03-22 16:47 GMT

ಹನೂರು,ಮಾ.22: ಮಾಜಿ ಸಚಿವ ವಿ ಸೋಮ್ಮಣ್ಣರವರೇ, ನೀವು ಹಿರಿಯರು ಮತ್ತು ರಾಜ್ಯದ ನಾಯಕರು. ನೀವು ಎಂದಿಗೂ ಸಹ ಹನೂರು ಕ್ಷೇತ್ರಕ್ಕೆ ಆಸೆ ಪಡಬೇಡಿ. ತಾವು ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಚಲಿತರಾಗಿ ಬೆಳೆಯಿರಿ. ಆದರೆ ನಮ್ಮ ಹನೂರು ಕ್ಷೇತ್ರದಲ್ಲಿ ಮಾಜಿ ಸಚಿವ ದಿ.ನಾಗಪ್ಪರವರ ಪುತ್ರ ಪ್ರಿತನ್‍ ನಾಗಪ್ಪರವರ ರಾಜಕೀಯ ಭವಿಷ್ಯವನ್ನು ಚಿವುಟಲು ಮಂದಾಗಬೇಡಿ ಎಂದು ಮುಖಂಡ ಆನಾಪುರ ಉಮೇಶ್ ಮನವಿ ಮಾಡಿದರು.

ಹನೂರು ಪಟ್ಟಣದ ಲೋಕೊಪಯೋಗಿ ವಸತಿ ಗೃಹದಲ್ಲಿ ನಾಗಪ್ಪ ಅಭಿಮಾನಿಗಳಿಂದ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಲೈಮಹದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಇರುವಂತಹ ಈ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಶಮಾನಗಳಿಂದ ದಿವಂಗತ ಹೆಚ್ ನಾಗಪ್ಪನವರು ಹಾಗೂ ಅವರ ಕುಟಂಬದವರು ಸೇರಿ ಇಲ್ಲಿನ ಜನರ ಸೇವೆ ಮಾಡಿಕೂಂಡು ಬಂದಿದ್ದಾರೆ. ಆ ಕುಟಂಬದವರು ಚುನಾವಣೆಗಳಲ್ಲಿ ಗೆದ್ದರೂ ಸೋತರೂ ಸಹ 30ರಿಂದ 40ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳ ಸಾಗರವನ್ನು ಅವರು ಹೊಂದಿರುತ್ತಾರೆ. ಸುದೀರ್ಘವಾಗಿ ಸೇವೆ ಮಾಡಿಕೂಂಡು ಬಂದಿದ್ದ ದಿ.ಹೆಚ್ ನಾಗಪ್ಪರವರು ದುರ್ಘಟನೆಯಲ್ಲಿ ಜೀವ ತೆತ್ತಿದ್ದಾರೆ. ಅವರ ಕುಟುಂಬ ಈವಾಗಲೂ ಕ್ಷೇತ್ರ ಜನತೆಯ ಸೇವೆಯಲ್ಲಿ ನಿರತರಾಗಿ ನಾಗಪ್ಪನವರ ಹಾದಿಯಲ್ಲೇ ಬಂದಿರುತ್ತಾರೆ. ಇವರ ಪುತ್ರರಾದ ಪ್ರೀತನ್‍ ನಾಗಪ್ಪರವರು ವೈದ್ಯ ವೃತ್ತಿಯಿಂದ ಅಭಿಮಾನಿಗಳ ಒತ್ತಾಯದ ಮೇರೆಗೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗುತ್ತೇನೆ ಎಂದು ಕ್ಷೇತ್ರದ ನಾನಾ ಕಡೆ ಸಂಚರಿಸಿದ್ದಾರೆ. ಈ ಯುವಕನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸೋಣ ಎಂದು ಆತ ಹೋದಲೆಲ್ಲಾ ಹೃದಯ ತುಂಬಿ ಅವನನ್ನು ಹಾರೈಸಿದ್ದಾರೆ. ಆದ್ದರಿಂದ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಮಾಡಲು ಅವರ ಗೆಲುವಿಗೆ ನೀವು ಸಹ ಸಹಕರಿಸಿ. ನೀವು ನಾಗಪ್ಪರವರ ಕುಟಂಬದ ಕಂದನ ರಾಜಕೀಯ ಭವಿಷ್ಯವನ್ನು ಚಿವುಟಬೇಡಿ ಎಂದು ತಿಳಿಸಿದರು 

ಈ ಸಂದರ್ಭದಲ್ಲಿ ಹನೂರು ಸುಬ್ಬಣ್ಣ, ಕಾಮಗೆರೆ ರವಿ ,ಕೋಟೆಬಸಪ್ಪ ಪೂನ್ನಾಚ್ಚಿ ಎಂ ಪ್ರಭಾಕರ್ ಮಾಜಿ ಕಾರ್ಯದರ್ಶಿ(ಮಂಡಲ), ಪಾಳ್ಯ ಗೋಪಾಲನಾಯ್ಕ, ಮಾಜಿತಾಲೂಕು ಪಂಚಾಯತ್ ಸದಸ್ಯ ನಟೇಶ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಾಗೇಂದ್ರಬಾಬು, ಬಿಜೆಪಿ ಮುಖಂಡರುಗಳಾದ ಶಿವರಾಮು, ನಂಜಪ್ಪ, ಮತ್ತು ದಿ.ನಾಗಪ ಅಭಿಮಾನಿ ಬಳಗದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News