ಫೆಬ್ರವರಿಯಲ್ಲಿ ಕುಸಿದ ಜಿಎಸ್‌ಟಿ ಸಂಗ್ರಹ ಪ್ರಮಾಣ

Update: 2018-03-27 12:43 GMT

ಹೊಸದಿಲ್ಲಿ, ಮಾ.27: ಕೇವಲ ಶೇ.69 ಕರದಾತರು ಆದಾಯ ದಾಖಲಿಸಿರುವ ಕಾರಣ ಫೆಬ್ರವರಿ ತಿಂಗಳಲ್ಲಿ 85,174 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ. ಫೆಬ್ರವರಿಯಿಂದ ಮಾರ್ಚ್ 25ರವರೆಗೆ 59.51 ಲಕ್ಷ ಜಿಎಸ್‌ಟಿಆರ್ 3ಬಿ ದಾಖಲಾಗಿದೆ. ಇದು ಪ್ರತಿ ತಿಂಗಳು ಆದಾಯ ದಾಖಲಿಸಬೇಕಾದ ಕರದಾತರ ಕೇವಲ ಶೇ. 69 ಭಾಗವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಅವಧಿಯಲ್ಲಿ 85,174 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಜನವರಿಯಲ್ಲಿ 86,318 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದರೆ ಡಿಸೆಂಬರ್‌ನಲ್ಲಿ 88,929 ಕೋಟಿ ರೂ. ಮತ್ತು ನವೆಂಬರ್‌ನಲ್ಲಿ 83,716 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಫೆಬ್ರವರಿ ತಿಂಗಳಲ್ಲಿ ಸಂಗ್ರಹವಾದ ಜಿಎಸ್‌ಟಿಯಲ್ಲಿ 14,945 ಕೋಟಿ ರೂ. ಕೇಂದ್ರ ಜಿಎಸ್‌ಟಿಯಾದರೆ 20,456 ಕೋಟಿ ರೂ. ರಾಜ್ಯ ಜಿಎಸ್‌ಟಿಯಾಗಿದೆ. ಇದರ ಹೊರತಾಗಿ, 42,456 ಕೋಟಿ ರೂ. ಸಂಯೋಜಿತ ಜಿಎಸ್‌ಟಿ ರೂಪದಲ್ಲಿ ಸಂಗ್ರಹವಾಗಿದ್ದರೆ 7,317 ಕೋಟಿ ರೂ. ಪರಿಹಾರ ಸೆಸ್ ಸಂಗ್ರಹಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಮಾರ್ಚ್ 25ರವರೆಗೆ 1.05 ಕೋಟಿ ತೆರಿಗೆ ಪಾವತಿದಾರರು ಜಿಎಸ್‌ಟಿಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವಾಲಯ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News