ಕಲಬುರಗಿ: ಶಾಸಕ ಡಾ.ಉಮೇಶ್ ಜಾಧವ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Update: 2018-03-28 16:41 GMT

ಕಲಬುರಗಿ,ಮಾ.28: ಕಲಬುರಗಿ ಜಿಲ್ಲೆಯ ಚಿಂಚೋಳಿ ಮತಕ್ಷೇತ್ರದ ಶಾಸಕ ಡಾ.ಉಮೇಶ ಜಾಧವ ಪ್ರಯಾಣಿಸುತ್ತಿದ್ದ ವಾಹನ ಪಲ್ಟಿಯಾಗಿದ್ದು, ಘಟನೆಯಲ್ಲಿ ಶಾಸಕರ ಕೈಗೆ ಗಾಯಗಳಾಗಿವೆ. 

ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಮಿರಿಯಾಣ ಕಡೆ ಪ್ರಯಾಣಿಸುತ್ತಿದ್ದಾಗ ಶಾಸಕರ ವಾಹನಕ್ಕೆ ಆಕಳು ಅಡ್ಡಬಂದಿದೆ. ಹೀಗಾಗಿ ಆಕಳನ್ನು ರಕ್ಷಿಸಲು ಚಾಲಕ ಯತ್ನಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಘಟನೆಯಲ್ಲಿ ಶಾಸಕ ಡಾ.ಉಮೇಶ ಜಾಧವರ ಕೈಗೆ ಹಾಗೂ ಜನಾರ್ಧನ ಎಂಬುವರಿಗೆ ಗಾಯಗಳಾಗಿವೆ. ಚಿಂಚೋಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News