ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ದೂರು ದಾಖಲು: ಹಿಂಪಡೆಯಲು ಬಿಜೆಪಿ ಕಾರ್ಯಕರ್ತರಿಂದ ಒತ್ತಾಯ

Update: 2018-03-31 18:18 GMT

ಹುಬ್ಬಳ್ಳಿ, ಮಾ. 31: ಸಂಸದ ಪ್ರಹ್ಲಾದ್ ಜೋಶಿ ಮೇಲೆ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯುವಂತೆ ಬಿಜೆಪಿ ಕಾರ್ಯಕರ್ತರು ಪೊಲೀಸ್ ಆಯುಕ್ತ ಎಂ.ಎನ್. ನಾಗರಜ ಅವರಿಗೆ ಒತ್ತಾಯಿಸಿದರು.

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಸಂಸದರ ಮೇಲಿನ ಪ್ರಕರಣ ಕೈ ಬಿಡಬೇಕೆಂದು ಒತ್ತಾಯಿಸಿದರು.

ಮಾರ್ಚ್ 25ರಂದು ಗೌಸಿಯಾ ಟೌನ್ ನಿವಾಸಿ ಗುರುಸಿದ್ದಪ್ಪ ಅಂಬಿಗೇರ ಎಂಬವರ ಕೊಲೆಯಾಗಿತ್ತು. ಇದರ ಹಿನ್ನೆಲೆ ಮಾ. 29 ರಂದು ಗುರುಸಿದ್ದಪ್ಪ ನಿವಾಸಕ್ಕೆ ಭೇಟಿ‌ ನೀಡಿದ ಸಂಸದರು ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ, ಬಳಿಕ ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿ ಈ ಭಾಗ ಮಸೀದಿಗಳಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಸಂಗ್ರಹಿಸಲಾಗಿದೆ ಎಂದು ವಿವಾವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಕಸಬಾ ಪೇಟೆ ಪೊಲೀಸ್ ಠಾಣೆ ಎದುರು ಸಂಸದರ ವಿರುದ್ಧ ಪ್ರತಿಭಟಿಸಲಾಗಿತ್ತು. ಹೀಗಾಗಿ ಇಂದು ಸಂಸದರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ.

ಆದರೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಮಾಡದೆ ಪೊಲೀಸರು, ಸಂಸದರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಮತ್ತು ಸಂಸದರ ಮೇಲಿನ‌ ಪ್ರಕರಣ ಹಿಂಪಡೆಯಬೇಕೆಂದು ಪೊಲೀಸ್ ಆಯುಕ್ತರಿ ಬಿಜೆಪಿ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿ ಜೆ ಪಿ ಕಾರ್ಯಕರ್ತರು ಹಾಗೂ ಪೊಲೀಸ್ ಆಯುಕ್ತರ ಮಧ್ಯೆ ವಾಗ್ವಾದ ನಡೆಯಿತು. ತಮ್ಮ ಬೆಡಿಕೆಗಳನ್ನು ಎರಡು ದಿನದಲ್ಲಿ ಈಡೇರಿದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News