ತುಮಕೂರು: ಅಪರ ಜಿಲ್ಲಾಧಿಕಾರಿಯಾಗಿ ಸಿ. ಸೋಮಶೇಖರ್ ಅಧಿಕಾರ ಸ್ವೀಕಾರ
Update: 2018-03-31 18:35 GMT
ತುಮಕೂರು,ಮಾ.31: ಅಪರ ಜಿಲ್ಲಾಧಿಕಾರಿಯಾಗಿ ಸಿ. ಸೋಮಶೇಖರ್ ಶನಿವಾರ ಅಧಿಕಾರ ವಹಿಸಿಕೊಂಡರು.
ಪ್ರಭಾರ ಅಪರ ಜಿಲ್ಲಾಧಿಕಾರಿಗಳಾಗಿದ್ದ ಮಧುಗಿರಿ ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ ಅವರಿಂದ ಪ್ರಭಾರ ವಹಿಸಿಕೊಂಡರು. ಅಪರ ಜಿಲ್ಲಾಧಿಕಾರಿಗಳಾಗಿದ್ದ ಸಿ. ಅನಿತಾ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಿ. ಸೋಮಶೇಖರ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು.