ಒಡಿಶಾ ರಾಜ್ಯ ಸ್ಥಾಪನೆ

Update: 2018-03-31 18:51 GMT

1931: ನಿಕರಾಗುವಾ ದೇಶದ ರಾಜಧಾನಿ ಮನಾಗುವಾ ಎಂಬಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 2,000 ಜನ ಬಲಿಯಾದ ವರದಿಯಾಗಿದೆ.
1936: ಒರಿಯಾ ಭಾಷೆ ಮಾತನಾಡುವ ಜನರ ಪ್ರದೇಶ ಒರಿಸ್ಸಾ ಹೆಸರಿನಲ್ಲಿ ಈ ದಿನ ಸ್ಥಾಪನೆಯಾಯಿತು. ಬ್ರಿಟಿಷ್ ಆಡಳಿತದಲ್ಲಿ ಆರಂಭಗೊಂಡ ಈ ರಾಜ್ಯಕ್ಕೆ 2011ರ ನ.4ರಂದು ಒರಿಸ್ಸಾ ಎಂಬ ಇಂಗ್ಲಿಷ್ ಹೆಸರನ್ನು ಬದಲಾಯಿಸಿ ಒಡಿಶಾ ಎಂದು ಮರುನಾಮಕರಣ ಮಾಡಲಾಯಿತು. ಒಡಿಶಾ ಪ್ರದೇಶವು ಕನಿಷ್ಠ 5,000 ವರ್ಷಗಳ ಇತಿಹಾಸ ಹೊಂದಿದೆ. ವೌರ್ಯ ಸಾಮ್ರಾಟ ಅಶೋಕನು ಕಳಿಂಗ ಯುದ್ಧದಿಂದಾದ ಸಾವು ನೋವುಗಳಿಂದ ಮನನೊಂದು ಬುದ್ಧನ ಅಹಿಂಸಾ ತತ್ವವನ್ನು ಅಪ್ಪಿಕೊಂಡಿದ್ದು ಈ ಪ್ರದೇಶದಲ್ಲೇ. ವಿಶ್ವ ವಿಖ್ಯಾತ ಕೋನಾರ್ಕ್‌ನ ಸೂರ್ಯ ದೇವಾಲಯ ಒಡಿಶಾದ ಹೆಮ್ಮೆ.
1944: ಜಪಾನ್ ಪಡೆಗಳು ಭಾರತದ ಪೂರ್ವ ರಾಜ್ಯ ಮಣಿಪುರದ ಜೆಸ್ಸಾಮಿ ಪ್ರದೇಶವನ್ನು ವಶಪಡಿಸಿಕೊಂಡವು.
1966: ಪ.ಆಫ್ರಿಕಾದ ದೇಶ ಸೆನೆಗಲ್‌ನ ಡಾಕರ್‌ನಲ್ಲಿ ವಿಶ್ವದ ಪ್ರಥಮ ಕಪ್ಪು ಕಲಾಕೃತಿಗಳ ಮೇಳ ನಡೆಯಿತು.
1973: ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಒಕ್ಕೂಟ (ಒಪೆಕ್) ಪೆಟ್ರೋಲ್‌ನ ಬೆಲೆಯಲ್ಲಿ ಶೇ.5.4ರಷ್ಟು ಹೆಚ್ಚಳ ಮಾಡಿತು.
1976: ಗುರು-ಫ್ಲೂಟೊ ಗ್ರಹಗಳ ಗುರುತ್ವಾಕರ್ಷಣ ಶಕ್ತಿಯ ಕುರಿತು ಪ್ರಥಮ ಬಾರಿಗೆ ಇಂಗ್ಲೆಂಡ್‌ನ ಖಗೋಳಶಾಸ್ತ್ರಜ್ಞ ಪ್ಯಾಟ್ರಿಕ್ ಮೂರ್ ವರದಿ ಮಾಡಿದರು.
2004: ಜಿ-ಮೇಲ್ ವ್ಯವಸ್ಥೆಯನ್ನು ವೆಬ್ ತಾಣ ಗೂಗಲ್ ಇಂದು ಪರಿಚಯಿಸಿತು. ಆದರೆ ಜಿ-ಮೇಲ್ ಆರಂಭಗೊಂಡ ದಿನಾಂಕದಲ್ಲಿ ಗೊಂದಲವಿದೆ.
2017: 
ಅಮೆರಿಕದ ಖ್ಯಾತ ಗಾಯಕ, ಕವಿ ಬಾಬ್ ಡೈಲಾನ್ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿದರು. 1889: ಆರೆಸ್ಸೆಸ್‌ನ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಜನ್ಮದಿನ.
1989: ಜನಪ್ರಿಯ ಸಮಾಜವಾದಿ ನಾಯಕ ಎಸ್.ಎಮ್.ಜೋಶಿ ನಿಧನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ