ಯೋಗಾನರಸಿಂಹನ ಹುಂಡಿಗೆ ದಾಖಲೆ ಕಾಣಿಕೆ

Update: 2018-04-08 15:22 GMT

ಮಂಡ್ಯ, ಎ.8: ಬೆಟ್ಟದೊಡೆಯ ಮೇಲುಕೋಟೆ ಶ್ರೀ ಯೋಗಾನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ  ಇದೇ ಪ್ರಥಮ ಭಾರಿಗೆ  12,63,793 ರೂ. ಗಳಷ್ಟು ದಾಖಲೆಯ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ.

ವೈರಮುಡಿ ಬ್ರಹ್ಮೋತ್ಸವದ ವೇಳೆ ಎರಡು ತಿಂಗಳಲ್ಲಿ ಹುಂಡಿಗಳಲ್ಲಿ ಭಾರಿ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದ್ದು, ಇತ್ತಿಚಿನ ವರ್ಷಗಳಲ್ಲೇ ಈ ಪ್ರಮಾಣದ ಕಾಣಿಕೆ ಸಂಗ್ರಹವಾಗಿರಲಿಲ್ಲ.

ಶನಿವಾರ ಕಂದಾಯ ಮತ್ತು ಮುಜರಾಯಿ ಇಲಾಖೆ, ಬ್ಯಾಂಕ್  ನೌಕರರ ಸಹಕಾರದಲ್ಲಿ ಯೋಗಾನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಬೆಟ್ಟದ ಗರ್ಭಗುಡಿ ಸೇರಿದಂತೆ ಒಟ್ಟು 4 ಹುಂಡಿಗಳಲ್ಲಿ ಸಂಗ್ರಹವಾದ ಕಾಣಿಕೆ ಹಣ ಎಣಿಕೆ ಮಾಡಲಾಯಿತು. ಹಳೆಯ 500 ಮುಖ ಬೆಲೆಯ 11 ನೋಟು, 1000 ಮುಖ ಬೆಲೆಯ 2 ನೋಟುಗಳು ಸಹ ಸಿಕ್ಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News