ದಾವಣಗೆರೆ: ಪ್ರಿಪೇಡ್ ಆಟೋ ಕೌಂಟರ್ ಕಾರ್ಯಾರಂಭಕ್ಕೆ ಚಾಲನೆ

Update: 2018-04-13 16:32 GMT

ದಾವಣಗೆರೆ,ಎ.13: ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಿಪೇಡ್ ಆಟೋ ಕೌಂಟರ್ ಪ್ರಾರಂಭಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹೇಳಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಇಂದಿನಿಂದ ಪ್ರಿಪೇಡ್ ಆಟೋ ಕೌಂಟರ್ ಕಾರ್ಯಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಯಾಣಿಕರಿಂದ ಆಟೋದವರು ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆಂಬ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲಿ ಪ್ರಿಪೇಡ್ ಆಟೋ ಕೌಂಟರ್ ಜಾರಿಗೊಳಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮತ್ತು ಆಟೋ ಡ್ರೈವರ್ ಗಳ ನಡುವೆ ಜಗಳ ತಪ್ಪಿಸಿದಂತಾಗುತ್ತದೆ. ಪ್ರಯಾಣಿಕರ ಲಗೇಜ್‍ಗಳು ಕಳ್ಳತನವಾಗದಂತೆ ನೋಡಿಕೊಳ್ಳಬಹುದಾಗಿದೆ ಎಂದರು.

ಇದೀಗ ಜಿಲ್ಲಾಡಳಿತ ರೈಲ್ವೆ ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ ಬಳಿ ಪ್ರಿಪೇಡ್ ಆಟೋ ಕೇಂದ್ರಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಈ ಪ್ರಿಪೇಡ್ ಆಟೋ ಕೇಂದ್ರವು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಪ್ರಿಪೇಡ್ ಆಟೋ ಅನುಕೂಲ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಬಸ್ ನಿಲ್ದಾಣದಲ್ಲೂ ಪ್ರಿಪೇಡ್ ಆಟೋ ಕೌಂಟರ್ ಪ್ರಾರಂಭ ಮಾಡಲಾಗುವುದು. ಇದರ ಸದುಪಯೋಗವನ್ನು ಪ್ರಯಾಣಿಕರು ಪಡೆದುಕೊಳ್ಳಬೇಕೆಂದರು.

ಐಜಿಪಿ ಶರತ್ಚಂದ್ರ, ಎಸ್ಪಿ ಆರ್. ಚೇತನ್, ಆರ್‍ಟಿಓ ಅಧಿಕಾರಿ ಶ್ರೀನಿವಾಸ್, ಆನಂದ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News