ಕಾರ್ಗಿಲ್: ಪಾಕ್ ನುಸುಳುವಿಕೆಯ ಸುಳಿವು ನೀಡಿದ್ದ ಬಖೇರ್‌ವಾಲಾಗಳು

Update: 2018-04-17 05:16 GMT

1965ರಲ್ಲಿ ಭಾರತ-ಪಾಕ್ ಯುದ್ಧದ ವೇಳೆ ಭಾರತೀಯ ಸೇನೆಯ ಜೊತೆ ಗ್ರಾಮಸ್ಥರು ಕೈಜೋಡಿಸಿ ಹೋರಾಡುವಂತೆ ಮಾಡಿದ್ದಕ್ಕಾಗಿ ಬಖೇರ್‌ವಾಲಾ ಬುಡಕಟ್ಟು ಪಂಗಡದ ವೌಲ್ವಿ ಗುಲಾದಿನ್ ಅವರನ್ನು ಭಾರತ ಸರಕಾರ ಪುರಸ್ಕರಿಸಿತ್ತು. 1975ರ ಭಾರತ-ಪಾಕ್ ಯುದ್ಧದಲ್ಲೂ ಪಾಕ್ ಸೈನಿಕರ ಒಳನುಸುಳುವಿಕೆಯ ಬಗ್ಗೆ ಭಾರತದ ಸೇನೆಗೆ ಕ್ಲಪ್ತ ಸಮಯದಲ್ಲಿ ಮಾಹಿತಿಯನ್ನು ಒದಗಿಸುತ್ತಿದ್ದ ಬಖೇರ್‌ವಾಲಾ ಪಂಗಡದ ಮಹಿಳೆ ಮಾಲಿ ಬಿ ಅವರನ್ನು ಭಾರತೀಯ ಸೇನೆ ಗೌರವಿಸಿತ್ತು.

 ಜಮ್ಮು ಕಾಶ್ಮೀರದ ಕಥುವಾದಲ್ಲಿ ಬಖೇರ್‌ವಾಲಾ ಪಂಗಡದ ಎಂಟು ವರ್ಷದ ಬಾಲಕಿಯೊಬ್ಬಳ ಬರ್ಬರ ಅತ್ಯಾಚಾರ ಹಾಗೂ ಕೊಲೆಘಟನೆಯು ಇಡೀ ದೇಶವನ್ನು ದಿಗ್ಭ್ರಮೆಗೊಳಿಸಿದೆ. ಈ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಬಳಿಕ ಅವರ ವಿರುದ್ಧ 18 ಪುಟಗಳ ಚಾರ್ಜ್ ಶೀಟನ್ನು ಪೊಲೀಸರು ಸಿದ್ಧಪಡಿಸಿದ್ದಾರೆ. ಮೃತ ಬಾಲಕಿ ವಾಸವಾಗಿದ್ದ ಗ್ರಾಮದಿಂದ ಬಖೇರ್‌ವಾಲಾ ಮುಸ್ಲಿಮ್ ಸಮುದಾಯವನ್ನು ಓಡಿಸುವುದೇ ಈ ಹೇಯ ಕೃತ್ಯದ ಉದ್ದೇಶವಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

ಬಖೇರ್‌ವಾಲಾ ಮುಸ್ಲಿಂ ಸಮುದಾಯದ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ.

ಬಖೇರ್‌ವಾಲಾ

ಬಖೇರ್‌ವಾಲಾಗಳು ಅಲೆಮಾರಿ ಪಂಗಡವಾಗಿದ್ದು, ಮುಸ್ಲಿಂ ಧರ್ಮೀಯರಾಗಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಬಖೇರ್‌ವಾಲಾ ಹಾಗೂ ಗುಜ್ಜರ್‌ಗಳು ಜಮ್ಮುಕಾಶ್ಮೀರದ ಪರಿಶಿಷ್ಟ ಪಂಗಡ ಜನಸಂಖ್ಯೆಯ ಶೇ.80ರಷ್ಟಿದ್ದಾರೆ. 1975ರ ಆನಂತರ ಬಖೇರ್‌ವಾಲಾಗಳು ಬಟ್ಟಿ ಬಾರಿಘರ್ ಪ್ರದೇಶದಲ್ಲಿ ಖಾಯಂ ಆಗಿ ನೆಲೆಸತೊಡಗಿದರು. ಆಗಿನ ಜಮ್ಮುಕಾಶ್ಮೀರ ಅಧ್ಯಕ್ಷ ಶೇಖ್ ಅಬ್ದುಲ್ಲಾ, ಬಖೇರ್‌ವಾಲಾಗಳಿಗೆ ಕಾಡು ಪ್ರದೇಶಗಳಲ್ಲಿ ವಾಸವಾಗುವ ಹಕ್ಕುಗಳನ್ನು ನೀಡಿದ್ದರು. ತರುವಾಯ, ಕೆಲವು ಬಖೇರ್‌ವಾಲಾಗಳು ಕಾಡುಪ್ರದೇಶಗಳ ಪಕ್ಕದಲ್ಲೇ ಇರುವ ಜಮೀನುಗಳನ್ನು ಖರೀದಿಸಿದ್ದರು.


 ಕೇಂದ್ರ ಸರಕಾರವು 1991ರಲ್ಲಿ ಬಖೇರ್‌ವಾಲಾಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಿತ್ತು ಹಾಗೂ ಅವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಿ ಹುದ್ದೆಗಳಲ್ಲಿಯೂ ಅವರಿಗೆ ಮೀಸಲಾತಿ ಘೋಷಿಸಿತ್ತು. ರಾಜ್ಯ ಸರಕಾರದ ಉದ್ಯೋಗಗಳಲ್ಲಿ ಗುಜ್ಜರ್‌ಗಳ ಜೊತೆ ಬಖೇರ್‌ವಾಲಾಗಳಿಗೂ ಶೇ.10 ಹಾಗೂ ಕೇಂದ್ರದ ಉದ್ಯೋಗಗಳಲ್ಲಿ ಶೇ.7ರಷ್ಟು ಮೀಸಲಾತಿಯನ್ನು ಘೋಷಿಸಲಾಗಿತ್ತು.

ಭಾರತ-ಪಾಕ್ ಯುದ್ಧದಲ್ಲಿ ಶೌರ್ಯ ಪ್ರದರ್ಶಿಸಿದ್ದ ಬಖೇರ್‌ವಾಲಾಗಳು

ಕಾರ್ಗಿಲ್ ಯುದ್ಧಕ್ಕೆ ಮುನ್ನ, 1999ರಲ್ಲಿ ಅಲ್ಲಿನ ಪರ್ವತ ಪ್ರದೇಶದೊಳಗೆ ಪಾಕ್ ಸೈನಿಕರು ನುಸುಳಿದ್ದ, ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಭಾರತೀಯ ಸೈನಿಕರಿಗೆ ನೀಡಿದವರು ಅಲೆಮಾರಿ ಬಖೇರ್‌ವಾಲಾ ಸಮುದಾಯದವರು ಎಂಬ ವಿಷಯ ಹಲವರಿಗೆ ತಿಳಿದಿಲ್ಲ. 1965ರಲ್ಲಿ ಭಾರತ-ಪಾಕ್ ಯುದ್ಧದ ವೇಳೆ ಭಾರತೀಯ ಸೇನೆಯ ಜೊತೆ ಗ್ರಾಮಸ್ಥರು ಕೈಜೋಡಿಸಿ ಹೋರಾಡುವಂತೆ ಮಾಡಿದ್ದಕ್ಕಾಗಿ ಬಖೇರ್‌ವಾಲಾ ಬುಡಕಟ್ಟು ಪಂಗಡದ ವೌಲ್ವಿ ಗುಲಾದಿನ್ ಅವರನ್ನು ಭಾರತ ಸರಕಾರ ಪುರಸ್ಕರಿಸಿತ್ತು. 1975ರ ಭಾರತ-ಪಾಕ್ ಯುದ್ಧದಲ್ಲೂ ಪಾಕ್ ಸೈನಿಕರ ಒಳನುಸುಳುವಿಕೆಯ ಬಗ್ಗೆ ಭಾರತದ ಸೇನೆಗೆ ಕ್ಲಪ್ತ ಸಮಯದಲ್ಲಿ ಮಾಹಿತಿಯನ್ನು ಒದಗಿಸುತ್ತಿದ್ದ ಬಖೇರ್‌ವಾಲಾ ಪಂಗಡದ ಮಹಿಳೆ ಮಾಲಿ ಬಿ ಅವರನ್ನು ಭಾರತೀಯ ಸೇನೆ ಗೌರವಿಸಿತ್ತು.
ಹಿಮಾಲಯ ಪರ್ವತಪ್ರದೇಶಗಳಲ್ಲಿ ಅಧಿಕವಾಗಿ ವಾಸಿಸುವ ಬಖೇರ್‌ವಾಲಾ (ಗುಜ್ಜರ್ ಬಖೇರ್‌ವಾಲಾ)ಗಳು ಹೆಚ್ಚಾಗಿ ಜೀವನೋಪಾಯಕ್ಕೆ ಆಡುಸಾಕಣೆಯನ್ನೇ ಅವಲಂಭಿಸಿದ್ದಾರೆ. ಇಸ್ಲಾಂನ ಸುನ್ನಿ ಪಂಗಡದವರಾದ ಬಖೇರ್‌ವಾಲಾಗಳು ಜಮ್ಮುಕಾಶ್ಮೀರ ಹಾಗೂ ಅಫ್ಘಾನಿಸ್ತಾನದ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿದ್ದಾರೆ. 2001ರಲ್ಲಿ ಇವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು.
ಮೂಲತಃ ಅಲೆಮಾರಿ ಪಂಗಡವಾದರೂ,ಇತ್ತೀಚಿನ ದಶಕಗಳಲ್ಲಿ ಅವರು ಜಮ್ಮುಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಖಾಯಂ ಆಗಿ ವಾಸ್ತವ್ಯವನ್ನು ಹೊಂದಿದ್ದಾರೆ.
ಕೃಪೆ: ದಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್

Writer - ಆರ್.ಎನ್.

contributor

Editor - ಆರ್.ಎನ್.

contributor

Similar News

ಜಗದಗಲ
ಜಗ ದಗಲ